ಕರ್ನಾಟಕ

karnataka

ETV Bharat / state

ಹುಲಿ ಕಳೇಬರ ಪತ್ತೆ : 3 ಜನರನ್ನು ಬಲಿ ಪಡೆದಿದ್ದ ವ್ಯಾಘ್ರ ಇದೇನಾ? - Kodagu latest news

ಪೊನ್ನಂಪೇಟೆ ತಾಲೂಕಿನ ಕೋತೂರು ಗ್ರಾಮದಲ್ಲಿ ‌ಸತ್ತಿರುವ ಸ್ಥಿತಿಯಲ್ಲಿ ಹುಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.

Tiger
ಹುಲಿ

By

Published : Mar 19, 2021, 1:53 PM IST

Updated : Mar 19, 2021, 2:00 PM IST

ಕೊಡಗು:ಕೊಡಗು ಜಿಲ್ಲೆಯಲ್ಲಿ 3 ಜನರನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ. ಇದರ ಬೆನ್ನಲೆ ನಾಗಹೊಳೆ ಭಾಗದಲ್ಲಿ ಹುಲಿ ಕಳೇಬರ ಪತ್ತೆಯಾಗಿದೆ.

ಪೊನ್ನಂಪೇಟೆ ತಾಲೂಕಿನ ಕೋತೂರು ಗ್ರಾಮದಲ್ಲಿ ಹುಲಿ ‌ಸತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಬಾರಿ ಅತಂಕ‌ ಉಂಟುಮಾಡಿದ್ದ ಹುಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ನರ ಭಕ್ಷಕ ಹುಲಿ‌ನಾ ಇಲ್ಲ ಇದು ಬೇರೆ ಹುಲಿನಾ ಅಂತ ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಲೆ ಸಹಿತ ಇರುವ ಹುಲಿ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ‌ ಬಂಧನ

ಹುಲಿ‌ ದಾಳಿ ನಡೆಸಿ ಮೂರು ಜನರನ್ನು‌ ಕೊಂದು ಹಾಕಿದ್ದ 4 ಕಿಮೀ ದೂರದಲ್ಲಿ ಹುಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಹಲವಾರು ದಿನಗಳಿಂದ ಹುಲಿ‌ ಸೆರೆಹಿಡಿಯುವಂತೆ ಪ್ರತಿಭಟನೆ ಮಾಡುತ್ತಿದ ಸ್ಥಳೀಯರಿಗೆ ಆಂತಕ ಕಡಿಮೆಯಾಗಿದೆ. ದಾಳಿ‌ ಮಾಡಿದ ಹುಲಿ‌ ಇದಲ್ಲ ಅಂತ ತಿಳಿದು ಬಂದ್ರೆ ಸ್ಥಳೀಯರು‌ ಮತ್ತಷ್ಟು ಅತಂಕ ಪಡುವ ಸ್ಥಿತಿ ನಿರ್ಮಾಣವಾಗುತ್ತೆ.

ಪತ್ತೆಯಾದ ಹುಲಿ ಕಳೇಬರ

ಒಂದು ಕಡೆ ಹುಲಿ ಕಳೇಬರ ಪತ್ತೆಯಾಗಿದೆ ಇನ್ನೊಂದು ಕಡೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಕಳೆದ 25 ದಿನಗಳಿಂದ 150 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಸಾಕಾನೆಗಳಿಂದ ಹುಲಿ ಸೆರೆಗೆ ಶೋಧ ನಡೆಯುತ್ತಿದೆ. ಆದ್ರೆ ಹುಲಿ‌ಮಾತ್ರ ಪತ್ತೆಯಾಗಿಲ್ಲ.

ಇದನ್ನೂ ಓದಿ: ಕೊಡಗಿನಲ್ಲಿ ಹುಲಿ ದಾಳಿಗೆ ಕಾರ್ಮಿಕ ಮಹಿಳೆ ಬಲಿ

ಹುಲಿ ಪತ್ತೆಗಾಗಿ ಕ್ಯಾಮರಾಗಳನ್ನು ಇಟ್ಟಿದ್ರು ಕ್ಯಾಮರಾ ಕಣ್ಣಿಗೆ ಮಾತ್ರ ಸಿಕ್ಕಿಲ್ಲ. ಈವರೆಗೆ 3 ಜನರನ್ನು 11ಹೆಚ್ಚು ಹಸುಗಳನ್ನು ಕೊಂದು ಹಾಕಿದೆ. ಹುಲಿ ಸೆರೆಹಿಡಿರಿ ಇಲ್ಲ ಕೊಂದು ಹಾಕಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು ಇದರ ಬೆನ್ನಲ್ಲೆ ಹುಲಿ ಸತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

Last Updated : Mar 19, 2021, 2:00 PM IST

ABOUT THE AUTHOR

...view details