ಮಡಿಕೇರಿ(ಕೊಡಗು):ವೀರಾಜಪೇಟೆ ತಾಲೂಕಿನ ತೆರಾಲು ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ಮುಳುಗು ತಜ್ಞರು ಪತ್ತೆ ಮಾಡಿದ್ದಾರೆ.
ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆ - kodagu latestnews
ವೀರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಕರೆಗಿಳಿದಿದ್ದ ಓರ್ವ ಕಾರ್ಮಿಕ ಮುಳುಗಿದ್ದ. ಆತನನ್ನು ರಕ್ಷಿಸಲು ಮುಂದಾದ ಇನ್ನೋರ್ವ ಸಹ ನೀರುಪಾಲಾಗಿದ್ದ. ಇಂದು ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
![ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ಕಾರ್ಮಿಕರ ಮೃತದೇಹಗಳು ಪತ್ತೆ Dead bodies of workers found which drowned in lake](https://etvbharatimages.akamaized.net/etvbharat/prod-images/768-512-6114674-thumbnail-3x2-kodagu.jpg)
ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಕಾರ್ಮಿಕರ ಮೃತ ದೇಹಗಳು ಪತ್ತೆ..!
ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಕಾರ್ಮಿಕರ ಮೃತ ದೇಹಗಳು ಪತ್ತೆ
ಸೋಮವಾರ ತೆರಾಲು ಗ್ರಾಮದ ಬೊಳ್ಳೇರ ಪೊನ್ನಪ್ಪ ಅವರಿಗೆ ಸೇರಿದ ಕೆರೆಗೆ ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಕೆರೆಗೆ ಬಿದ್ದ ಒಬ್ಬರನ್ನು ರಕ್ಷಣೆ ಮಾಡಲು ಹೋಗಿ ಈಶಾನ್ಯ ಭಾರತದ ಕಾರ್ಮಿಕರಾದ ಪುಟ್ಟ (22) ಹಾಗೂ ವಿನೋದ್ (22) ಎಂಬ ಕಾರ್ಮಿಕರಿಬ್ಬರು ಮೃತಪಟ್ಟಿದ್ದರು. ಇಂದು ಮುಳುಗು ತಜ್ಞರು ಕೆರೆಯಲ್ಲಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.