ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ರಂಗೇರಿದ ಜನೋತ್ಸವ ದಸರಾ... ಕಳೆಗಟ್ಟಿದ ಕಲಾ ಸಂಭ್ರಮ - madikeri dasara news

ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವ ದಸರಾ ಆರಂಭವಾಗಿದ್ದು, ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಕೊಡಗಿನಲ್ಲಿ ರಂಗೇರಿದ ಜನೋತ್ಸವ ದಸರಾ

By

Published : Oct 1, 2019, 10:36 AM IST

ಕೊಡಗು:ಒಂದೆಡೆ ಮೈಸೂರು ದಸರಾ ರಂಗೇರಿದರೆ, ಅತ್ತ ಮಂಜಿನ ನಗರಿ ಮಡಿಕೇರಿ ಜನೋತ್ಸವ ದಸರಾ ಕೂಡಾ ಆರಂಭವಾಗಿದೆ.

ಮಡಿಕೇರಿಯ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಡೋಲು ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಡಿಕೇರಿ ದಸರಾಗೆ ಈ ಬಾರಿ ಒಂದು ಕೋಟಿ ರೂ.ಅನುದಾನ ಸಿಕ್ಕಿದ್ದು, ವೈಭವದ ಕಾರ್ಯಕ್ರಮಗಳ ನಡೆಯುವ ನಿರೀಕ್ಷೆಯಲ್ಲಿ ಜನರಿದ್ದಾರೆ.‌ ಆದರೆ, ಈ ಬಾರಿ ಯಾವುದೇ ಸ್ಟಾರ್ ಅಟ್ರಾಕ್ಷನ್ ಇಲ್ಲದಿರುವುದು ಮಡಿಕೇರಿ ಜನತೆಗೆ ನಿರಾಸೆ ಮೂಡಿಸಿದೆ.

ಕೊಡಗಿನಲ್ಲಿ ರಂಗೇರಿದ ಜನೋತ್ಸವ ದಸರಾ

ಸ್ಥಳೀಯ ಕಲಾವಿದರಿಗೆ ಮತ್ತು ಶಾಸ್ತ್ರೀಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಿದ್ದು, ಮೊದಲ ದಿನವೇ ಆಸನಗಳು ಖಾಲಿಯಾದ ವಾತಾವರಣ ಕಂಡುಬಂದಿದೆ. ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಗೈರಾಗಿದ್ದಾರೆ. ಕಾರ್ಯಕ್ರಮದಲ್ಲಿ ದಸರಾ ಸಮಿತಿ ಪದಾಧಿಕಾರಿಗಳು, ಕೊಡಗು ಎಸ್ಪಿ, ಸಿಇಓ, ಎಡಿಸಿ ಮತ್ತಿತರರು ಪಾಲ್ಗೊಂಡಿದ್ದರು.

ABOUT THE AUTHOR

...view details