ಕೊಡಗು:ವಿಭಿನ್ನ ಸಂಸ್ಕೃತಿ ಹಾಗೂ ಆಚರಣೆಗಳ ಕೊಡಗಿನ ಜನ ದಸರಾ ಸಂಭ್ರಮದಲ್ಲಿದ್ದಾರೆ. ಹಬ್ಬ ಯಾವುದೇ ಇರಲಿ, ಇಲ್ಲಿ ಕೋವಿಗಳು ಹೊರ ಬರುವುದು ಸಾಮಾನ್ಯ. ಮಡಿಕೇರಿಯಲ್ಲಿ ದಸರಾ ಪ್ರಯುಕ್ತ ಕೊಡಗಿನ ಸಾಂಪ್ರದಾಯಿಕ ಆಚರಣೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ವಿಶೇಷವಾಗಿ ಗಮನ ಸೆಳೆಯಿತು.
ಕೊಡವರ ದಸರಾ ಸಂಭ್ರಮ: ಗಮನ ಸೆಳೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ವಿಭಿನ್ನ ಸಂಸ್ಕೃತಿ ಹಾಗೂ ಆಚರಣೆಗಳ ಕೊಡವರು ದಸರಾ ಸಂಭ್ರಮದಲ್ಲಿದ್ದಾರೆ. ಹಬ್ಬ ಯಾವುದೇ ಇರಲಿ, ಇಲ್ಲಿ ಕೋವಿಗಳು ಹೊರ ಬರುವುದು ಸಾಮಾನ್ಯ. ಮಡಿಕೇರಿಯಲ್ಲಿ ದಸರಾ ಪ್ರಯುಕ್ತ ಕೊಡಗಿನ ಸಾಂಪ್ರದಾಯಿಕ ಆಚರಣೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.
ಗುಂಡು ಹಾರಿಸಿ ದಸರಾಗೆ ಚಾಲನೆ ನೀಡಿದ ಕೊಡಗಿನ ಸ್ಥಳೀಯರು
22 ಬಂದೂಕು ಮೂಲಕ 100 ಯಾರ್ಡ್ ದೂರದಲ್ಲಿ ಇಟ್ಟ ತೆಂಗಿನಕಾಯಿಗೆ ಗುರಿ ಇಟ್ಟು ಕಾಯಿಯಿಂದ ನೀರು ಚಿಮ್ಮಿಸಲು ಸ್ಪರ್ಧಿಗಳು ನಾ ಮುಂದು ತಾ ಮುಂದು ಎಂಬಂತೆ ಪಾಲ್ಗೊಂಡಿದ್ದರು. ಮಹಿಳೆಯರೂ ಕೂಡಾ ತಾವೂ ಯಾರಿಗೂ ಕಡಿಮೆ ಇಲ್ಲವೆಂಬಂತೆ ಬಂದೂಕು ಹಿಡಿದು ತಮ್ಮ ಪ್ರತಿಭೆ ಪ್ರದರ್ಶಿಸಿದ್ರು.