ಕೊಡಗು: ಟ್ರಾನ್ಸ್ಮೀಟರ್ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲೇ ಲೈನ್‌ಮೆನ್ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.
ಕೊಡಗು: ಟ್ರಾನ್ಸ್ಮೀಟರ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ಮನ್ ಸಾವು - kodagu latest nnews
ಟ್ರಾನ್ಸ್ಮೀಟರ್ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲೇ ಲೈನ್‌ಮೆನ್ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ನಡೆದಿದೆ.
ಲೈನ್‌ಮೆನ್ ನಿರ್ಲಕ್ಷ್ಯ : ವಿದ್ಯುತ್ ಸ್ಪರ್ಷಿಸಿ ಸ್ಥಳದಲ್ಲೇ ಸಾವು
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಸಿ.ಆರ್. ಯೋಗೇಶ್ (25) ಪ್ರಾಣ ಕಳೆದುಕೊಂಡ ಲೈನ್‌ಮೆನ್,
ಯೋಗೇಶ್ ಇಲ್ಲಿನ ಹೊಸೂರು ಗೋಪಾಲಕೃಷ್ಣ ಅವರ ತೋಟದಲ್ಲಿ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಚ್ಚರ ವಹಿಸದೆ ಹಾಗೂ ಲೈನ್ ಆಫ್ ಮಾಡದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಮೃತ ಯೋಗೇಶ್ ಕಳೆದ 4 ವರ್ಷಗಳಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.