ಕರ್ನಾಟಕ

karnataka

ETV Bharat / state

ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾಂಸ್ಕೃತಿಕ ರಸಸಂಜೆ - ಮಡಿಕೇರಿಯಲ್ಲಿ ವೈದ್ಯರ ಭರ್ಜರಿ ಡ್ಯಾನ್ಸ್

ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅದ್ಧೂರಿ ಸಾಂಸ್ಕೃತಿಕ ಸಮಾರಂಭ ಜರುಗಿದೆ.

ಮಡಿಕೇರಿಯಲ್ಲಿ ವೈದ್ಯರ ಭರ್ಜರಿ ಡ್ಯಾನ್ಸ್
ಮಡಿಕೇರಿಯಲ್ಲಿ ವೈದ್ಯರ ಭರ್ಜರಿ ಡ್ಯಾನ್ಸ್

By

Published : May 6, 2022, 8:38 AM IST

ಮಡಿಕೇರಿ: ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯಕ್ಷಗಾನ, ವಿದ್ಯಾರ್ಥಿಗಳೇ ಬರೆದು ಹಾಡಿದ ರ್ಯಾಪ್ ಸಾಂಗ್, ಜಾದು ಪ್ರದರ್ಶನ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಮಾಡಿದ ಕೋವಿಡ್ ನಾಟಕ, ಕನ್ನಡ, ಹಿಂದಿ ಹಾಡಿಗೆ ಮಾಡಿರುವ ನೃತ್ಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಿದೆ.


ವಿದ್ಯಾರ್ಥಿಗಳ ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತಾರೆಯರೂ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕೊಡಗಿನವರೇ ಆದ ಹರ್ಷಿಕಾ ಪೂಣಚ್ಚ ಹಾಗೂ ಬುವನ್ ಪೊನ್ನಣ್ಣ ಭಾಗವಹಿಸಿದ್ದರು. ಕನ್ನಡ ರ್ಯಾಪರ್ ಅಲೋಕ್ ವೇದಿಕೆ ಹತ್ತುತ್ತಿದಂತೆ ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ: ಗಾಳಿಸಹಿತ ಜಡಿಮಳೆ: ಬೆಸ್ಕಾಂ ವ್ಯಾಪ್ತಿಯಲ್ಲಿ 238 ವಿದ್ಯುತ್ ಕಂಬಗಳು ಧರಾಶಾಹಿ, ಪವರ್ ಕಟ್‌

ABOUT THE AUTHOR

...view details