ಕೊಡಗು: ಜಿಲ್ಲೆಯ ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬೆಟ್ಟದಲ್ಲಿ ವಾಸ ಮಾಡುವ ಜನರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟದಲ್ಲಿ ವಾಸ ಮಾಡುತ್ತಿದ್ದ 80 ಕುಟುಂಬದ 221 ಜನರನ್ನು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಿ ಸ್ಥಳಾಂತರ ಮಾಡಲಾಗಿದೆ.
ಅಯ್ಯಪ್ಪ ಬೆಟ್ಟದಲ್ಲಿ ಬಿರುಕು: 80 ಕುಟುಂಬಗಳ 221 ಜನರ ಸ್ಥಳಾಂತರ - Ayyappa Hill People Displacement
ವಿರಾಜಪೇಟೆ ತಾಲೂಕಿನ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
![ಅಯ್ಯಪ್ಪ ಬೆಟ್ಟದಲ್ಲಿ ಬಿರುಕು: 80 ಕುಟುಂಬಗಳ 221 ಜನರ ಸ್ಥಳಾಂತರ Crack in Ayyappa Hill](https://etvbharatimages.akamaized.net/etvbharat/prod-images/768-512-15837517-thumbnail-3x2-news.jpg)
ಅಯ್ಯಪ್ಪ ಬೆಟ್ಟ ಮಲೆತಿರಿಕೆ ಬೆಟ್ಟದ ಜನರ ಸ್ಥಳಾಂತರ
ಅಯ್ಯಪ್ಪ ಬೆಟ್ಟ ಮಲೆತಿರಿಕೆ ಬೆಟ್ಟದ ಜನರ ಸ್ಥಳಾಂತರ
2018ರಲ್ಲಿ ಜಲ ಪ್ರಳಯವಾದಾಗ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತು. ಆಗ ಕೂಡ ಅಲ್ಲಿಂದ ಜನರನ್ನು ಬೇರೆ ಕಟೆಗೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ಜಿಲ್ಲೆಯಲ್ಲಿ ಮಳೆ ಹೆಚ್ಚಾದ ಪರಿಣಾಮ ಮತ್ತೆ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಬೆಟ್ಟ ಕುಸಿತವಾದರೆ ಬೆಟ್ಟದ ಮಣ್ಣು ಕೆಳಗೆ ಇರುವ ಮನೆಗಳ ಮೇಲೆ ಬೀಳುವ ಆತಂಕ ಜನರನ್ನು ಕಾಡುತ್ತಿದೆ.
ಇದನ್ನೂ ಓದಿ:ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಹಾನಿ: ಸಿಎಂ ಭೇಟಿ