ಮಡಿಕೇರಿ :ಮೇಯುವಾಗ ಆಯತಪ್ಪಿ ಪಾಳುಬಾವಿಗೆ ಬಿದ್ದ ಹಸುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.
ಪಾಳು ಬಾವಿಗೆ ಬಿದ್ದ ಹಸು.. ಎನ್‌ಡಿಆರ್‌ಎಫ್ ತಂಡದಿಂದ ಮೂಕ ಪ್ರಾಣಿಯ ರಕ್ಷಣೆ
ಬಾವಿಯ ಕೆಳಗಿಳಿದ್ದ ಹಸುವಿನ ಹೊಟ್ಟೆಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಗೆ ಕೈಜೋಡಿಸಿದರು.
ನಗರದ ಐಟಿಐ ಕಾಲೇಜು ರಸ್ತೆ ಸಮೀಪದ ಬೊಟ್ಟೋಳಂಡ ಕಾಶಿ, ಪೂಣಚ್ಚ ಎಂಬುವರ ಮನೆ ಸಮೀಪವಿರುವ ಪಾಳುಬಿದ್ದ ಬಾವಿಯ ಬಳಿ ಬಿಡಾಡಿ ಹಸುವೊಂದು ಮೇಯುವ ಸಂದರ್ಭ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಯುವಕರು ಸ್ಥಳೀಯನಿವಾಸಿಗಳಿಗೆ ತಿಳಿಸಿದರು. ಬಳಿಕ ಮೈತ್ರಿ ಭವನದಲ್ಲಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಕರೆಸಿ ಅಗ್ನಿಶಾಮಕ ದಳದೊಂದಿಗೆ ಅರ್ಧ ಗಂಟೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಬಾವಿಯ ಕೆಳಗಿಳಿದ್ದ ಹಸುವಿನ ಹೊಟ್ಟೆಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಗೆ ಕೈಜೋಡಿಸಿದರು.
ಸುಮಾರು 100 ವರ್ಷ ಹಳೆಯದಾದ ಪಾಳು ಬಿದ್ದ ಭಾವಿಯಲ್ಲಿ ಯಾವುದೇ ತಡೆಗೋಡೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.