ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಎಫೆಕ್ಟ್​: ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಸು ಸಾವು - ಚಿಕಿತ್ಸೆ ಲಭಿಸದೆ ಹಸು ಸಾವು

ಕೊರೊನಾ ಮಹಾಮಾರಿಯ ಎಫೆಕ್ಟ್ ಕೇವಲ ಮನುಷ್ಯನ ಜೀವನಕ್ಕೆ ಅಷ್ಟೇ ಅಲ್ಲ ಮೂಕ ಪ್ರಾಣಿಗಳಿಗೂ ಕಂಟಕ ತಂದೊಡ್ಡಿದೆ.

Cow death
ಹಸು ಸಾವು

By

Published : Apr 12, 2020, 8:36 PM IST

ಕೊಡಗು:ಕರು ಹಾಕಿದ್ದ ಹಸುವೊಂದಕ್ಕೆ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ನಡೆದಿದೆ.

ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಸು ಸಾವು

ಮರಗೆಲಸ ಮಾಡುತ್ತಿದ್ದ ಕುಶಾಲನಗರದ ಶಿವಕುಮಾರ್ ಎಂಬುವರು ಕೆಲಸ ಬಿಟ್ಟು ಹೈನುಗಾರಿಕೆ ಮಾಡಲೆಂದು ತಿಂಗಳ ಹಿಂದೆ 70 ಸಾವಿರ ರೂ. ಕೊಟ್ಟು ಹೆಚ್‍ಎಫ್ ಹಸು ತಂದಿದ್ದರು. 20 ದಿನಗಳ ಹಿಂದೆ ಅದು ಕರು ಹಾಕಿತ್ತು. ಆದರೆ ಆ ಹಸುವಿಗೆ ತೀವ್ರ ರಕ್ತಸ್ರಾವವಾಗಿದೆ.

ಬಳಿಕ ಶಿವಕುಮಾರ್ ಹಸುವಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಕೊರೊನಾ ಎಫೆಕ್ಟ್​ನಿಂದ ದೇಶವೇ ಬಂದ್ ಆಗಿರುವುದರಿಂದ ಚಿಕಿತ್ಸೆ ಕೊಡಿಸಲು ವೈದ್ಯರು ಸಿಕ್ಕಿಲ್ಲ. ಹೀಗಾಗಿ 20 ದಿನಗಳಿಂದ ನಿರಂತರವಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಹಸು ಮೃತಪಟ್ಟಿದೆ.

ಸದ್ಯ 20 ದಿನಗಳ ಕರು ಇದ್ದು, ತನ್ನ ತಾಯಿಗಾಗಿ ಮೂಕ ರೋದನ ಅನುಭವಿಸುತ್ತಿದೆ. ತಾಯಿಯನ್ನು ಕಳೆದುಕೊಂಡಿರುವ ಕರುವಿನ ಸ್ಥಿತಿ ಎಂತಹ ಕಟುಕರ ಕರುಳನ್ನೂ ಹಿಂಡುವಂತಿದೆ.

ABOUT THE AUTHOR

...view details