ಕರ್ನಾಟಕ

karnataka

ETV Bharat / state

ಮಡಿಕೇರಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣು... ಅನಾಥವಾಯ್ತು ಕಂದಮ್ಮ - undefined

ಮಡಿಕೇರಿಯ ಹೊರವಲಯದಲ್ಲಿರುವ ಮನೆಯಲ್ಲಿ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ದಂಪತಿಗಳು

By

Published : Apr 1, 2019, 9:54 PM IST

ಮಡಿಕೇರಿ:ಪುಟ್ಟ ಕಂದಮ್ಮನನ್ನು ಅನಾಥವಾಗಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರ ಹೊರವಲಯದ ಪಂಪ್ ಹೌಸ್ ಬಳಿ ನಡೆದಿದೆ.

ಚೇತನ್ (34), ಪತ್ನಿ ವಾಣಿ (28) ಮೃತ ದಂಪತಿ. ಚೇತನ್​ ಮಡಿಕೇರಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಸಲ ಮಾಡುತ್ತಿದ್ದರು. ಕೆಲಸ ಮುಗಿಸಿ ಚೇತನ್ ಊಟಕ್ಕೆಂದು ಮನೆಗೆ ಬಂದಿದ್ದ ವೇಳೆ ಮನೆ ಒಳಗಿನಿಂದ ಮಗು ಅಳುವ ಶಬ್ದ ಕೇಳಿಬಂದಿತ್ತು. ತಕ್ಷಣ ಚೇತನ್​ ಬಾಗಿಲು ಒಡೆದು ಒಳನುಗ್ಗಿದಾಗ ವಾಣಿ ನೇಣಿಗೆ ಶರಣಾಗಿದ್ದರು.

ಆತ್ಮಹತ್ಯೆಗೆ ಶರಣಾದ ದಂಪತಿ

ಇದನ್ನು ಕಂಡ ಚೇತನ್​ ಪತ್ನಿ ಮೃತದೇಹ ಇಳಿಸಿ ಸ್ವತಃ ಪೊಲೀಸ್ ಠಾಣೆಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ತಿಳಿಸಿದ್ದಾನೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವ ವೇಳೆಗಾಗಲೇ ಚೇತನ್​ ಕೂಡ ಹೆಣವಾಗಿ ಬಿದ್ದಿದ್ದ.

ಇನ್ನು ದಂಪತಿಗಳ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಪ್ರಕರಣ ಕುರಿತು ಮಡಿಕೇರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿ ಮಗುವನ್ನು ಅನಾಐವಾಗಿಸಿ ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಮನಕಲಕುವಂತಿದೆ.

For All Latest Updates

TAGGED:

ABOUT THE AUTHOR

...view details