ಮಡಿಕೇರಿ (ಕೊಡಗು): ಲಾಕ್‍ಡೌನ್ ಸಡಿಲಗೊಂಡ ಬಳಿಕ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ಮಡಿಕೇರಿ ಘಟಕದಿಂದ ಹತ್ತಾರು ಬಸ್ಗಳು ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಇಂದಿನಿಂದ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.
ಮಡಿಕೇರಿ ಎಸ್ಆರ್ಟಿಸಿ ಡಿಪೋ ಸಿಬ್ಬಂದಿಗೆ ಕೊರೊನಾ ಪರೀಕ್ಷೆ - ಮಡಿಕೇರಿ ಸುದ್ದಿ
ಮಡಿಕೇರಿ ಕೆಎಸ್ಆರ್ಟಿಸಿ ಘಟಕದಿಂದ ಹತ್ತಾರು ಬಸ್ಗಳು ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿವೆ. ಹೀಗಾಗಿ ಡಿಪೋದಲ್ಲಿರುವ 486 ಸಿಬ್ಬಂದಿಗೆ ಇಂದಿನಿಂದ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ.
ಮಡಿಕೇರಿ ಡಿಫೋದ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ
ಮಡಿಕೇರಿ ಡಿಪೋದಲ್ಲಿ 486 ಸಿಬ್ಬಂದಿಯಿದ್ದು, ಎಲ್ಲ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ. ಡಿಪೋದ ಓರ್ವ ಸಿಬ್ಬಂದಿಗೆ ಕೊರೊನಾ ವೈರಸ್ ಲಕ್ಷಣಗಳಿದ್ದು, ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಡಿಪೋದಲ್ಲಿರುವ ಉಳಿದ ಕೆಎಸ್ಆರ್ಟಿಸಿ ಸಿಬ್ಬಂದಿಗೂ ಕೊರೊನಾ ಆತಂಕ ಎದುರಾಗಿದೆ.