ಕೊಡಗು :ಜಿಲ್ಲೆಯ ಸುಂಟಿಕೊಪ್ಪದ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಅಧಿಕ ಜನರಿಗೆ ಕೋವಿಡ್ ದೃಢಪಟ್ಟಿದೆ. ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿ ಸಮೀಪದ ತೋಟದ ಮನೆಗಳಲ್ಲಿ ವಾಸವಿರುವ 50ಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ.
ಇದರಿಂದ ಉಲುಗುಲಿ, ಅಂಜನಗೇರಿ, ಬೆಟ್ಟಗೇರಿ ಗ್ರಾಮಗಳಲ್ಲಿ ಸೀಲ್ಡೌನ್ ಮಾಡಲಾಗಿದೆ. ಸೋಂಕಿತರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಂಕಿತರು ಮನೆಯಿಂದ ಹೊರ ಬರಬಾರದು. ಮನೆಯಿಂದ ಹೊರ ಬಂದು ಓಡಾಟ ನಡೆಸದಂತೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಬೇಕು.