ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ: ಮುಂಬೈನಿಂದ ಬಂದಿದ್ದ ಮಹಿಳೆಗೆ ಸೋಂಕು​ - ಕೊಡಗು ಸುದ್ದಿ

ಮೇ 16ರಂದು ಮುಂಬೈನಿಂದ ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

Corona positive case found in kodagu
ಬಾಂಬೆಯಿಂದ ಬಂದಿದ್ದ ಮಹಿಳೆಗೆ ಪಾಸಿಟಿವ್​

By

Published : May 18, 2020, 10:32 AM IST

ಕೊಡಗು: ಗ್ರೀನ್ ಝೋನ್ ಆಗಿರುವ ಕೊಡಗಿಗೆ ಮತ್ತೆ ಕೊರೊನಾ‌ ಎಂಟ್ರಿ ಕೊಟ್ಟಿದ್ದು, ಮುಂಬೈನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದಾಗಿ ವರದಿಯಾಗಿದೆ.

ಮೇ 16ರಂದು ಮುಂಬೈನಿಂದ ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮುಂಬೈನಿಂದ ಕೊಡಗಿನ ಸಂಪಾಜೆ ಚೆಕ್‌ ಪೋಸ್ಟ್ ಮೂಲಕ ಬಂದಿದ್ದಾರೆ. ಅಲ್ಲಿಂದ ಬಂದ ಕಾರಣಕ್ಕೆ ಜಿಲ್ಲಾಡಳಿತ ಮಹಿಳೆಯನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿತ್ತು. ಬಳಿಕ ವೈದ್ಯರು ‌ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.

ನಿನ್ನೆ ರಾತ್ರಿ ಬಂದಿರುವ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details