ಕೊಡಗು: ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಜಿಲ್ಲಾಡಳಿತ ಜಾರಿಗೊಳಿಸಿದ್ದ ಸಿಆರ್‌ಪಿಸಿ 144 ನಿಷೇಧಾಜ್ಞೆಯನ್ನು ಅಗತ್ಯ ವಸ್ತುಗಳ ಖರೀದಿಗೆ 2 ಗಂಟೆ ಕಾಲ ಸಡಿಲಗೊಳಿಸಿದೆ.
ಕೊಡಗಿನಲ್ಲಿ 2 ಗಂಟೆ ಸಡಿಲಿಕೆ... ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ - ಕೊಡಗಿನ ಜಿಲ್ಲಾಡಳಿತ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಿಷೇಧಾಜ್ಞೆ
ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಕೊಡಗಿನ ಜಿಲ್ಲಾಡಳಿತ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸುತ್ತಿದ್ದಂತೆ ಜನತೆ ಮನೆಯಿಂದ ಹೊರ ಬಂದು ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಕೊಡಗಿನಲ್ಲಿ ಕೊರೊನಾ ಭೀತಿ
ಜಿಲ್ಲಾಡಳಿತ 12 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸುತ್ತಿದ್ದಂತೆ ಜನತೆ ಮನೆಯಿಂದ ಹೊರ ಬಂದು ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಯುಗಾದಿ ಹಬ್ಬದ ಹಿನ್ನೆಲೆ ತರಕಾರಿ-ಹಣ್ಣು, ಬೇವಿನಸೊಪ್ಪು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು.ಕೇವಲ ಎರಡು ತಾಸು ಮಾತ್ರ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಸಡಿಲಿಕೆ ನೀಡಿದ್ದರಿಂದ ಅಂಗಡಿಗಳಲ್ಲಿ ದಟ್ಟಣೆ ಹೆಚ್ಚಾಗಿತ್ತು. ಕೆಲವು ಮಳಿಗೆಗಳಲ್ಲಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿಯಲ್ಲಿ ನಿಂತು ವಸ್ತುಗಳನ್ನು ತೆಗೆದುಕೊಂಡರು.