ಕೊಡಗು :ಜಿಲ್ಲೆಗೆ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಿರುವ ಪರಿಣಾಮ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ 132 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ, ಜನ ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.
ಇಷ್ಟು ದಿನ ಶಾಲಾ- ಕಾಲೇಜುಗಳಲ್ಲಿ ಹರಡುತ್ತಿದ್ದ ಕೊರೊನಾ, ಇದೀಗ ಈ ಪ್ರವಾಸಿಗರು ಬಂದು ಉಳಿಯುವ ರೆಸಾರ್ಟ್ನಲ್ಲಿ ಹೆಚ್ಚಾಗುತ್ತಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೆರಿಯ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ನಲ್ಲಿ ಒಟ್ಟು 38 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ನಿನ್ನೆ 31, ಇಂದು 7 ಪಾಸಿಟಿವ್ ಕೇಸ್ ದೃಢವಾಗಿವೆ. ರೆಸಾರ್ಟ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ಮಾಡಿ 7 ದಿನ ಸೀಲ್ಡೌನ್ ಮಾಡಿದ್ದಾರೆ.
ರಾಜ್ಯ-ಹೊರ ರಾಜ್ಯಗಳಿಂದ ಜಿಲ್ಲೆಗೆ ಭೇಟಿ ನೀಡಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದರಿಂದ ಹೊರಗಿಂದ ಬರುವ ಪ್ರವಾಸಿಗರು ಕೊರೊನಾವನ್ನು ತಂದು ಹೋಂ ಸ್ಟೇ ಮತ್ತು ರೆಸಾರ್ಟ್ಗಳಿಗೆ ಹಂಚುತ್ತಿದ್ದಾರೆ. ರೆಸಾರ್ಟ್ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೊರೊನಾ ಹೆಚ್ಚುತ್ತಿದ್ದು, ಜನರು ಭಯದಲ್ಲಿ ಬದುಕುವಂತಾಗಿದೆ.