ಕರ್ನಾಟಕ

karnataka

ETV Bharat / state

ಕೊಡಗು ಜಿಲ್ಲೆಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದ 953 ಜನರಿಗೆ ಕೊರೊನಾ

ಈಗಾಗಲೇ ಕೊರೊನಾ ಮಹಾಮಾರಿ ಮೂರನೇ ಅಲೆ ಹರಡುವ ಆತಂಕದಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್​ ಆಗಿದೆ. ಕೇರಳದಿಂದ ಬರುವವರಿಗೆ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.

ವ್ಯಾಕ್ಸಿನ್ ಪಡೆದ 953 ಜನರಿಗೆ ಕೊರೊನಾ
ವ್ಯಾಕ್ಸಿನ್ ಪಡೆದ 953 ಜನರಿಗೆ ಕೊರೊನಾ

By

Published : Sep 12, 2021, 9:41 PM IST

ಕೊಡಗು: ಮೊದಲ ಡೋಸ್ ವ್ಯಾಕ್ಸಿನ್ ಪಡೆದು ಹೇಗೆ ಬೇಕೋ ಹಾಗೆ ಓಡಾಡಿಕೊಂಡಿದ್ದ ಜಿಲ್ಲೆಯ 953 ಜನರಿಗೆ ಮತ್ತೆ ಮಹಾಮಾರಿ ಕೊರೊನಾ ವಕ್ಕರಿಸಿದೆ.

ಹೌದು, ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇವರನ್ನೆಲ್ಲ ಪರೀಕ್ಷಿಸಲಾಗಿದೆ. ಈ ವೇಳೆ ಅವರೆಲ್ಲರಿಗೂ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರಿಗೂ ಆಸ್ಪತ್ರೆ ಮತ್ತು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.

ಆದರೆ ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗೆ ಇದುವರೆಗೆ ಯಾರಿಗೂ ಸೋಂಕು ದೃಢಪಟ್ಟಿರುವ ಪ್ರಕರಣಗಳಿಲ್ಲ. ಆದರೆ ಒಂದು ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಅಂತ ಬೇಕಾಬಿಟ್ಟಿ ಓಡಾಡುವ ಮೊದಲು ಎಚ್ಚರಿಕೆ ವಹಿಸದಿದ್ದರೆ ಸೋಂಕು ತಗುಲುವ ಚಾನ್ಸ್​ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಈಗಾಗಲೇ ಕೊರೊನಾ ಮಹಾಮಾರಿ ಮೂರನೇ ಅಲೆ ಹರಡುವ ಆತಂಕದಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಕೇರಳದಿಂದ ಬರುವವರಿಗೆ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.

ಆದ್ರೂ ಕೆಲವರಿಗೆ ಈಗಾಗಲೇ ವ್ಯಾಕ್ಸಿನೇಷನ್‌ ಮಾಡಿದವರಿಗೆ ಸೋಂಕು ಮತ್ತೆ ಹರಡುತ್ತಿದೆ. ಅಷ್ಟೇ ಅಲ್ಲದೇ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣದ ಶೇಕಡಾ 0.5 ಒಳಗೆ ಇತ್ತು. ಆದರೆ ಇಂದು ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಇಂದಿನ ಪಾಸಿಟಿವ್ ದರ ಶೇಕಡಾ 2.84ಕ್ಕೆ ಏರಿಕೆಯಾಗಿದೆ‌. ಹೀಗಾಗಿ ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕೋವಿಡ್‌ ವಿರುದ್ಧ ಸಮರ: ದೇಶಾದ್ಯಂತ 74 ಕೋಟಿ ಲಸಿಕೆ ಡೋಸ್‌ ವಿತರಣೆ

For All Latest Updates

TAGGED:

ABOUT THE AUTHOR

...view details