ಕೊಡಗು:ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಂಜಿನ ನಗರಿ ಕೊಡಗಿನೊಂದಿಗೆ ಗಡಿಗೆ ಹೊಂದಿಕೊಂಡಿರುವ ಕೇರಳ ಮಾಕುಟ್ಟ-ಕಣ್ಣೂರು ರಸ್ತೆಯನ್ನು ಜಿಲ್ಲಾಡಳಿತ ಸಂಪೂರ್ಣ ಬಂದ್ ಮಾಡಿದೆ.
ಕೊರೊನಾ ಭೀತಿ: ಕೊಡಗು-ಕೇರಳ ಅಂತರ್ ರಾಜ್ಯ ರಸ್ತೆ ಸಂಪರ್ಕ ಬಂದ್ - Kodagu-Kerala Interstate Road Connection Band
ಕೊರೊನಾ ಎಂಬ ರಕ್ಕಸನ ಅಟ್ಟಹಾಸಕ್ಕೆ ದೇಶ-ದೇಶಗಳ ಮಧ್ಯೆ ಅಷ್ಟೇ ಅಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ಸಂಪರ್ಕವೂ ಕಡಿತಗೊಳ್ಳುತ್ತಿದೆ.
ಕೊರೊನಾ ಭೀತಿ ಹಿನ್ನಲೆ: ಕೊಡಗು-ಕೇರಳ ಅಂತರ್ ರಾಜ್ಯ ರಸ್ತೆ ಸಂಪರ್ಕ ಬಂದ್
ಕೇರಳ ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರವುದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಈ ನಿರ್ಧಾರ ಕೈಗೊಂಡಿದ್ದಾರೆ.
ಕೇರಳ ರಾಜ್ಯ ಗಡಿ ಸಂಪರ್ಕದ ರಸ್ತೆಗೆ ಜೆಸಿಬಿ ಮೂಲಕ ಗುಂಡಿ ತೋಡಿಸಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ.