ಕೊಡಗು:ಅದು ಪ್ರಕೃತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿಕೊಂಡು ಸ್ವಚ್ಛಂದವಾಗಿ ಜೀವಿಸಿತ್ತು. ಎಲ್ಲೆಂದ್ರಲ್ಲಿ ತೃಪ್ತಿ ಆಗುವಷ್ಟು ಆಹಾರ ತಿನ್ನುತ್ತಾ ಸುತ್ತಲ ಹಳ್ಳಿಗರಿಗೆ ಆತಂಕ ಮೂಡಿಸಿತ್ತು. ನಾನು ನಡೆದದ್ದೇ ದಾರಿ ಎಂದು ಬೀಗುತ್ತಿದ್ದ ಮದಗಜ ಇದೀಗ ಮಾವುತರ ಬಂಧಿಯಾಗಿದೆ.
ಹೌದು, ಸೊಮವಾರಪೇಟೆ ತಾಲೂಕಿನ ಸಿದ್ದಾಪುರ, ಮೊದೂರು ಸುತ್ತಮುತ್ತಲು ಸ್ಥಳೀಯರಿಗೆ ಭಯ ಸೃಷ್ಟಿಸಿ ಪ್ರಾಣಹಾನಿ ಉಂಟುಮಾಡಿದ್ದ ಪುಂಡಾನೆಯನ್ನು ಮಾವುತರು ಬಂಧನದಲ್ಲಿಟ್ಟು ಪಳಗಿಸುತ್ತಿದ್ದಾರೆ. ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಉಪಟಳ ನೀಡುತ್ತಿದ್ದ ಆನೆಯನ್ನು ಕರೆತಂದು ನೀತಿಪಾಠ ಹೇಳಿ ಕೊಡುತ್ತಿದ್ದಾರೆ.
ಆನೆಗೆ ಮಾವುತರು ಹಾಗೂ ಕಾವಾಡಿಗಳು ಸಜ್ಞೆ ಹಾಗೂ ಮಾತುಗಳನ್ನು ಅರ್ಥೈಸುತ್ತಿದ್ದಾರೆ. ಅದಿ, ಆದ ಸರಕ್, ಸಲಾಂ, ಮುಂದೆ ಹೋಗು, ಹಿಂದೆ ಬಾ, ಮರದ ದಿಮ್ಮಿಗಳನ್ನು ಎತ್ತಿಕೋ, ಆಹಾರ ತಿನ್ನು, ನಮಸ್ಕರಿಸು ಎಂದೆಲ್ಲಾ ಸಂಸ್ಕಾರದ ಪಾಠವನ್ನು ಅದಕ್ಕೆ ಕಲಿಸುತ್ತಿದ್ದಾರೆ. ಬಂಧಿಯಾದ ಆನೆ ಅಸಹಾಯಕತೆ ಒಪ್ಪಿಕೊಂಡು ಮಾವುತನ ಮಾತಿಗೆ ತಲೆದೂಗುತ್ತಿದೆ.