ಕರ್ನಾಟಕ

karnataka

ETV Bharat / state

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಆರೋಪ:  ಶಾಸಕ ಕೆ.ಜಿ. ಬೋಪ್ಪಯ್ಯ ವಿರುದ್ದ ದೂರು..!

ಚುನಾವಣೆ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ತಿಮ್ಮಯ್ಯ ಎಂಬುವರು ದೂರು ನೀಡಿದ್ದಾರೆ.

MLA KG Boppiah
ದೂರುದಾರ ಪಿ.ಬಿ.ತಿಮ್ಮಯ್ಯ

By

Published : Mar 10, 2023, 5:39 PM IST

Updated : Mar 10, 2023, 9:10 PM IST

ಚುನಾವಣಾ ಆಯೋಗಕ್ಕೆ ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲೂ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದು ಚುನಾವಣಾ ನಿಯಮದ ಉಲಂಘನೆಯಾಗಿದೆ ಎಂದು ದೂರುದಾರ ತಿಮ್ಮಯ್ಯ ಆರೋಪ ಮಾಡಿದ್ದಾರೆ.

ಕೊಡಗು:ಚುನಾವಣೆ ಆಯೋಗಕ್ಕೆ ಶಾಸಕ ಕೆ.ಜಿ. ಬೋಪಯ್ಯ, ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ವಿರಾಜಪೇಟೆ ಪೋಲಿಸ್ ಠಾಣೆಯಲ್ಲಿ ಪಿ.ಬಿ.ತಿಮ್ಮಯ್ಯ ಎಂಬುವವರು ದೂರು ನೀಡಿದ್ದಾರೆ. ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದಾರೆ.

ಚುನಾವಣಾ ನಿಯಮವನ್ನು ಉಲಂಘನೆ ಆರೋಪ:ಚುನಾವಣಾ ಆಯೋಗಕ್ಕೆ ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲೂ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಇದು ಚುನಾವಣಾ ನಿಯಮದ ಉಲಂಘನೆಯಾಗಿದೆ ಎಂದು ದೂರುದಾರ ತಿಮ್ಮಯ್ಯ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ಆರೋಪ:ಶಾಸಕ ಕೆ.ಜಿ. ಬೋಪಯ್ಯ ಅವರು ಚುನಾವಣಾ ಆಯೋಗಕ್ಕೆ ತಮ್ಮ ವಯಸ್ಸನ್ನು ತಿದ್ದಿ ತಪ್ಪು ಮಾಹಿತಿ ನೀಡಿದ್ದಾರೆ. ಬೋಪಯ್ಯ 26-10-1979 ರಲ್ಲಿ ಬಾರ್ ಕೌನ್ಸಿಲ್​ನಲ್ಲಿ ವಕೀಲರಾಗಿದ್ದು, ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ. ಆದರೆ 2004ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು, ಅವರ ಜನ್ಮ ದಿನಾಂಕದ ಅನುಗುಣವಾಗಿ 53 ವರ್ಷ ಆಗಿದೆ. ಆದರೆ, ಬೋಪಯ್ಯ ಅವರು ತಮ್ಮ ವಯಸ್ಸನ್ನು 49 ಎಂದು ಹೇಳಿಕೊಂಡಿದ್ದಾರೆ ಎಂದು ತಿಮ್ಮಯ್ಯ ಆರೋಪಿಸಿದ್ದಾರೆ.

ಇದನ್ನು ಓದಿ:ಮದ್ಯ ನೀತಿ ಹಗರಣ: ಏಳು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ಮನೀಶ್ ಸಿಸೋಡಿಯಾ

ಅಲ್ಲದೆ, 2013ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು ಜನ್ಮ ದಿನಾಂಕದ ಅನುಗುಣವಾಗಿ 61 ವರ್ಷ ಆಗಿದೆ. ಆದರೆ, ಅವರು ಚುನಾವಣೆ ಆಯೋಗಕ್ಕೆ 58 ವರ್ಷ ಎಂದು ಹೇಳಿರುತ್ತಾರೆ. ಅಷ್ಟೇ ಅಲ್ಲದೇ 2018ನೇ ಚುನಾವಣೆಯಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ 67 ಆಗಿರುತ್ತದೆ. ಆದರೆ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ತಮ್ಮ ವಯಸ್ಸು 65 ಎಂದು ಹೇಳಿಕೊಂಡಿದ್ದಾರೆ ಎಂದು ಪಿ.ಬಿ.ತಿಮ್ಮಯ್ಯ ಆರೋಪ ಮಾಡಿದ್ದಾರೆ.

ಶಾಸಕರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೂ ದೂರು ನೀಡುವುದಾಗಿ ತಿಮ್ಮಯ್ಯ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಕೆ.ಜಿ. ಬೋಪಯ್ಯ ಪ್ರತಿಕ್ರಿಯೆ ನೀಡಿದರು.

ಶಾಸಕ ಕೆ.ಜಿ. ಬೋಪಯ್ಯ ಪ್ರತಿಕ್ರಿಯೆ:'' ಪ್ರತಿ ಚುನಾವಣೆ ಬಂದಾಗಲೂ ನನ್ನ ಜನ್ಮ ದಿನಾಂಕದ ಬಗ್ಗೆ ಸುಳ್ಳು ಆರೋಪ ಮಾಡುತ್ತಾ ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಯಾವುದೇ ದಾಖಲೆ ಇಲ್ಲದೇ ಜಿಲ್ಲೆಯ ಕೆಲವು ಡೋಂಗಿ ಪರಿಸರವಾದಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ತಂದೆ ಅನಕ್ಷರಸ್ಥರು. ಅವರು ನೀಡಿದ ಜನ್ಮ ದಿನಾಂಕದ ಪ್ರಕಾರವೇ ನಾನು ದಾಖಲೆಯಲ್ಲಿ ನಮೂದು ಮಾಡಿದ್ದೇನೆ'' ಎಂದು ಶಾಸಕ ಕೆ.ಜಿ. ಬೋಪಯ್ಯ ಈ ಬಗ್ಗೆ ಪತ್ರಿಕ್ರಿಯೆ ನೀಡಿದ್ದಾರೆ.

''ತಿಮ್ಮಯ್ಯ ಎಂಬ ವ್ಯಕ್ತಿಯ ಮೂಲಕ ಪರಿಸರವಾದಿಗಳು ದೂರು ನೀಡಿದ್ದಾರೆ. ನನ್ನ ವಿರುದ್ದ ಗುಂಪೊಂದು ಇಂತಹ ಅಪಪ್ರಚಾರದ ಮೂಲಕ ಷಡ್ಯಂತ್ರ ಮಾಡುತ್ತಿದೆ. ಆದರೆ, ನನ್ನ ಮತ್ತು ನನ್ನ ಕೆಲಸದ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ. ಕೊಡಗಿನ ಜನತೆ ಈ ಬಾರಿಯೂ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲಿದ್ದಾರೆ. ಕುತಂತ್ರಿಗಳ ಷಡ್ಯಂತ್ರಕ್ಕೆ ಜನ ಪಾಠ ಕಲಿಸಲಿದ್ದಾರೆ. ನನ್ನ ಎಲ್ಲ ದಾಖಲೆಗಳು ಸರಿಯಾಗಿ ಇದೆ. ಇಂತಹ ಷಡ್ಯಂತ್ರವನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಪಕ್ಷವೂ ಕೂಡ ನನಗೆ ಬೆಂಬಲ ನೀಡಿದೆ'' ಎಂದು ಮಾಧ್ಯಮಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಸುಮಲತಾ ಬಿಜೆಪಿ ಸೇರುತ್ತಾರೆ ಎಂದರೆ ಅದು ನಮಗೆ ಶಕ್ತಿ ಇದ್ದಂತೆ: ಸಂಸದ ಪ್ರತಾಪ್ ಸಿಂಹ

ಇದನ್ನು ಓದಿ:ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ: ಹುಣಸೂರು ನಗರಸಭೆ ಸದಸ್ಯನ ಸದಸ್ಯತ್ವ ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರ ಆದೇಶ

Last Updated : Mar 10, 2023, 9:10 PM IST

ABOUT THE AUTHOR

...view details