ಸುಂಟಿಕೊಪ್ಪ/ಕೊಡಗು:ದೇಶದ ತ್ರಿವಣ ಧ್ವಜದ ಚಿಹ್ನೆ ಇರುವ ಮುಖಗವಸು(ಮಾಸ್ಕ್) ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ತ್ರಿವರ್ಣ ಧ್ವಜ ಚಿಹ್ನೆಯಿರುವ ಮಾಸ್ಕ್ ಮಾರಾಟ: ಅಂಗಡಿ ಮಾಲೀಕನ ವಿರುದ್ಧ ದೂರು - ತ್ರಿವರ್ಣ ಧ್ವಜದ ಮಾಸ್ಕ್
ತ್ರಿವಣ ಧ್ವಜದ ಚಿಹ್ನೆ ಇರುವ ಮುಖಗವಸು(ಮಾಸ್ಕ್) ಮಾರಾಟ ಮಾಡುತ್ತಿದ್ದ ಡಯಾನ ಎಂಬ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.
![ತ್ರಿವರ್ಣ ಧ್ವಜ ಚಿಹ್ನೆಯಿರುವ ಮಾಸ್ಕ್ ಮಾರಾಟ: ಅಂಗಡಿ ಮಾಲೀಕನ ವಿರುದ್ಧ ದೂರು Tricolour mask](https://etvbharatimages.akamaized.net/etvbharat/prod-images/768-512-05:29:27:1595332767-kn-kdg-02-07-21-fir-av-7207093-21072020172713-2107f-1595332633-748.jpg)
ಪಟ್ಟಣದ ಕನ್ನಡ ವೃತ್ತದ ಸಮೀಪದ ಅಂಗಡಿಯೊಂದರಲ್ಲಿ ಅಸ್ಸೋಂ ಮೂಲದ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜ ಇರುವ ಮಾಸ್ಕ್ ಧರಿಸಿಕೊಂಡು ಓಡಾಡುತ್ತಿದ್ದರು. ಅವರನ್ನು ವಿಚಾರಿಸಿದಾಗ ಮಾಸ್ಕ್ ಅನ್ನು ಕನ್ನಡ ವೃತ್ತದ ಬಳಿಯಿರುವ ಡಯಾನ ಎಂಬ ಅಂಗಡಿಯಿಂದ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ದೊರೆತ ಕೂಡಲೇ ಪೊಲೀಸರು ಅಂಗಡಿಯಿಂದ ಮಾಸ್ಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದೇಶದ ತ್ರಿವಣ ಧ್ವಜ ಚಿಹ್ನೆಯಿರುವ ಮುಖಗವಸು ಮಾರಾಟ ಮಾಡಿ ಅಪಮಾನ ಎಸಗಿದ ಅಂಗಡಿ ಮಾಲೀಕನ ಮೇಲೆ ವಿಶ್ವ ಹಿಂದೂ ಪರಿಷತ್ ಸುಂಟಿಕೊಪ್ಪ ಘಟಕದ ಉಪಾಧ್ಯಕ್ಷ ಕೆ.ಕೆ.ವಾಸುದೇವ ಸುಂಟಿಕೊಪ್ಪ ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.