ಕರ್ನಾಟಕ

karnataka

ETV Bharat / state

'ಎಣ್ಣೆ'ಯಾಟ... ಔಷಧಿ ಚೀಟಿ ಕೇಳಿದ್ರೆ ಓರಿಜಿನಲ್​ ಕೊಡಲ್ಲ, ಜೆರಾಕ್ಸ್​ ಕೊಡ್ತೀನಿ ಅಂದ ವೈದ್ಯ!

ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ...ಆದರೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರೊಬ್ಬರ ವಿರುದ್ಧ ಪಾನಮತ್ತರಾಗಿ ಕರ್ತವ್ಯಕ್ಕೆ ಬಂದ ಆರೋಪ ಕೇಳಿ ಬಂದಿದೆ.

Community health center doctor

By

Published : Aug 19, 2019, 3:44 AM IST

ಕೊಡಗು:ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಈ ವೈದ್ಯ ಕರ್ತವ್ಯದಲ್ಲಿದ್ದುಕೊಂಡೆ ಕಂಠಪೂರ್ತಿ ಕುಡಿದು ರೋಗಿಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಿ ವಿಡಿಯೋ ವೊಂದು ವೈರಲ್​ ಆಗಿದೆ.

ಆಸ್ಪತ್ರೆಗೆ ಬಂದವರ ಜೊತೆ ವೈದ್ಯ ಸಂಭಾಷಣೆ ನಡೆಸಿರುವ ವಿಡಿಯೋ

ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಗಾಯಗೊಂಡ ರೋಗಿಯೊಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಡಾ.ಶಿವಕುಮಾರ್ ಎಂಬ ವೈದ್ಯರೊಬ್ಬರ ಕರ್ತವ್ಯದಲ್ಲಿದ್ದರು.

ಚಿಕಿತ್ಸೆ ನೀಡಿದ ವೈದ್ಯರ ಬಳಿ ರೋಗಿಯ ಕಡೆಯವರು ಔಷಧಿಯ ಚೀಟಿಯನ್ನು ಕೇಳಿದ್ದಾರೆ. ಅದಕ್ಕೆ ಆ ವೈದ್ಯ ಚೀಟಿ ಓರಿಜಿನಲ್​ ಕೊಡಲ್ಲ. ಜೆರಾಕ್ಸ್​ ಕೋಡುತ್ತೀವಿ ಅಂದ್ರು, ಅಷ್ಟಕ್ಕೆ ಸುಮ್ಮನಾಗದ ಅವರು ಏಕೆ ಸರ್​ ಓರಿಜಿನಲ್​ ಚೀಟಿ ಕೊಡಲ್ಲ ಎಂದು ಕೇಳಿದ್ದಾರೆ. ನನ್ನದು ಎಮ್​ಎಸ್​ಸಿ ಆಗಿದೆಯಪ್ಪಾ, ಜೆರಾಕ್ಸ್​ ಕೊಟ್ಟು ನಾವು ಓರಿಜಿನಲ್​ ಇಟ್ಟುಕೊಳ್ಳಬೇಕು ಎಂದಿದ್ದಾರೆ.

ವೈದ್ಯರ ವಿಚಿತ್ರ ವರ್ತನೆ ಕಂಡು ಆಸ್ಪತ್ರೆಯಲ್ಲಿದ್ದವರು ವೈದ್ಯರು ಮದ್ಯಪಾನ ಮಾಡಿದ್ದು, ಹೀಗೆ ಎಣ್ಣೆ ಕುಡಿದುಕೊಂಡಿದ್ರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತಾರೆ ಎಂದು ರೋಗಿ ಕಡೆಯವರು ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಈಗ ವೈರಲ್​ ಆಗಿದೆ.

ABOUT THE AUTHOR

...view details