ಕರ್ನಾಟಕ

karnataka

ETV Bharat / state

ಕೋವಿಡ್​​ನಿಂದ ಕಾಫಿ ಬೆಳೆಗಾರರು ಕಂಗಾಲು: ಕಾರ್ಮಿಕರ ಕೊರತೆಯಿಂದ ಗಿಡದಲ್ಲೇ ಒಣಗಿದ ಬೆಳೆ - ಕಾರ್ಮಿಕರ ಕೊರತೆಯಿಂದ ಗಿಡದಲ್ಲೇ ಒಣಗಿದ ಕಾಫಿ ಬೆಳೆ

ವಾಣಿಜ್ಯ ಬೆಳೆಗಳಾದ ಕಾಫಿ,‌ ಮೆಣಸು ನಂಬಿ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಜನರಿಗೆ ಕೋವಿಡ್​ ಮಾರಕವಾಗಿ ಪರಿಣಮಿಸಿದೆ. ಕೋವಿಡ್​ ಕಾರಣದಿಂದ ಕೊಡಗು ಜಿಲ್ಲೆಗೆ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಪರಿಣಾಮ ವರ್ಷದಿಂದ ಬೆಳೆದ ಕಾಫಿ ಬೆಳೆ ಕೈಗೆ ಸಿಗದೇ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೊಡಗಿನಲ್ಲಿ ಕೋವಿಡ್​ಯಿಂದ ಕಾಫಿ ಬೆಳೆಗಾರರು ಕಂಗಾಲು
ಕೊಡಗಿನಲ್ಲಿ ಕೋವಿಡ್​ಯಿಂದ ಕಾಫಿ ಬೆಳೆಗಾರರು ಕಂಗಾಲು

By

Published : Jan 28, 2022, 7:02 AM IST

ಕೊಡಗು: ಜಿಲ್ಲೆಯಲ್ಲಿ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಹಣ್ಣಾದ ಕಾಫಿ ಬೆಳೆ ಗಿಡದಲ್ಲೇ ಒಣಗಿ ಉದುರತೊಡಗಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ವರ್ಷದಿಂದ ಕಾಪಾಡಿಕೊಂಡು ಬಂದ ಕಾಫಿ ಬೆಳೆಯಿಂದ ಹೆಚ್ಚಿನ ಆದಾಯ ಬರುತ್ತದೆ, ಮಾಡಿದ ಸಾಲವನ್ನು ತೀರಿಸಬಹುದು ಎಂದು ಕಾಯುತ್ತಿದ್ದ ಬೆಳೆಗಾರರಿಗೆ ಕೊರೊನಾ ಕರಿ ನೆರಳು ಬಿದ್ದಿದೆ. ಕಾಫಿ ಕೊಯ್ಲಿಗೆ ಕೂಲಿ ಕಾರ್ಮಿಕರು ಸಿಕ್ಕದ ಹಿನ್ನೆಲೆ ಬೆಳೆ ತೋಟದಲ್ಲೇ ಉದುರುತ್ತಿದೆ.

ಕೊಡಗಿನಲ್ಲಿ ಕೋವಿಡ್​ಯಿಂದ ಕಾಫಿ ಬೆಳೆಗಾರರು ಕಂಗಾಲು

ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ವಾಣಿಜ್ಯ ಬೆಳೆಗಳಾದ ಕಾಫಿ,‌ ಮೆಣಸು ನಂಬಿ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಜನರಿಗೆ ಕೋವಿಡ್​ ಮಾರಕವಾಗಿ ಪರಿಣಮಿಸಿದೆ. ಕೋವಿಡ್​ ಕಾರಣದಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಹೊರ ಜಿಲ್ಲೆಗಳಿಂದ ಹಾಗೂ ರಾಜ್ಯದಿಂದ ಬರುತ್ತಿದ್ದ ಕೆಲಸಗಾರು ಸಹ ಜಿಲ್ಲೆಗೆ ಬರುತ್ತಿಲ್ಲ. ವರ್ಷದಿಂದ ಬೆಳೆದ ಕಾಫಿ ಬೆಳೆ ಕೈಗೆ ಸಿಗದೇ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಾಫಿ ತೋಟದಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರಿಗೆ ಕೊರೊನಾ ಬಂದಿದೆ. ಕೊರೊನಾ ವರದಿ ಕಡ್ಡಾಯ ಮಾಡಿರುವುದರಿಂದ ಪಕ್ಕದ ಗಡಿ ರಾಜ್ಯ ಕೇರಳ, ತಮಿಳುನಾಡಿನಿಂದ ಬರುತ್ತಿದ್ದ ಕಾರ್ಮಿಕರು ಈಗ ಬರುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಜಲಪ್ರಳಯದಿಂದ ಸಾವಿರಾರೂ ಎಕರೆ ಕಾಫಿ ತೋಟ ಕೊಚ್ಚಿ ಹೋಗಿದೆ. ಅಕಾಲಿಕ ಮಳೆಯಿಂದ ಕಾಫಿ ಹೂ ಬಿಡುವ ಸಮಯದಲ್ಲಿ ‌ಉದುರಿ ಹೋಗಿತ್ತು. ಕಾಡು ಪ್ರಾಣಿಗಳ ಕಾಟ ಬೇರೆ. ನಮಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಕಾಫಿ ಬೆಳೆಗಾರರು ಮನವಿ ಮಾಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details