ಕೊಡಗು :ಕಾಫಿನಾಡು ಕೊಡಗಿನಲ್ಲೀಗ ಎಲ್ಲೆಡೆ ಕಾಫಿ ಹೂ ಕಂಪು ಬೀರುತ್ತಿದೆ. ಕಾಫಿ ಕೊಯ್ಲು ಮುಗಿದು ಮುಂದಿನ ಫಸಲಿಗೆ ರೆಡಿಯಾಗುತ್ತಿರೋ ಕಾಫಿ ತೋಟಗಳಲ್ಲಿ ಅರಳಿ ನಿಂತಿರೋ ಶ್ವೇತವರ್ಣದ ಕುಸುಮಗಳು ಸುಗಂಧ ಬೀರುತ್ತಿವೆ. ವಿಶಾಲ ಪ್ರದೇಶದಲ್ಲಿ ಹಾಲು ಉಕ್ಕಿದಂತೆ ಕಂಡು ಬರುತ್ತಿರೋ ದೃಶ್ಯ ನಯನ ಮನೋಹರವಾಗಿದೆ. ನೋಡುಗರ ಕಣ್ಮನಸೆಳೆಯುತ್ತಿವೆ.
ದಕ್ಷಿಣದ ಕಾಶ್ಮೀರ ಅಂತೆಲೇ ಕರೆಸಿಕೊಳ್ಳುವ ಕಾಫಿ ನಾಡಿನಲ್ಲೀಗ ಕಾಫಿ ಹೂವಿನ ಘಮಲು ಹರಡಿದೆ. ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ರೊಬೊಸ್ಟಾ ಕಾಫಿ ತೋಟಗಳಲ್ಲಿ ಹೂಗಳು ನಳನಳಿಸುತ್ತಿವೆ. ಕಣ್ಣು ಹಾಯಿಸಿದಷ್ಟು ದೂರ ಹಾಲಿನ ನೊರೆಯಂತೆ ಕಂಡು ಬರುತ್ತಿದೆ.