ಮಡಿಕೇರಿ: ಕೊಡಗಿನಲ್ಲಿ ಅಕಾಲಿಕ ಮಳೆ (Rain) ಸುರಿಯುತ್ತಿರುವ ಪರಿಣಾಮ ಕಾಫಿ, ಮೆಣಸು ಬೆಳೆ (Pepper crop) ಉದುರುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಬೆಳೆಗಾರರು ಕಂಗಾಲಾಗಿದ್ದಾರೆ .
ಅಕಾಲಿಕ ಮಳೆಗೆ ನೆಲಕಚ್ಚಿದ ಕಾಫಿ ಬೆಳೆ: ರೈತರು ಕಂಗಾಲು
ಕೊಡಗು ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಕಾಫಿ (Coffee crop), ಮೆಣಸು ಬೆಳೆ (Pepper crop) ಉದುರುತ್ತಿದೆ.
ಅತಿಯಾದ ಮಳೆ ರೈತರಿಗೆ ಶಾಪವಾಗಿ ಪರಿಣಮಿಸಿದ್ದು, ನಿತ್ಯವೂ ಸುರಿಯುವ ಮಳೆಯಿಂದಾಗಿ ಕಾಫಿ, ಮೆಣಸು ಬೆಳೆ ನಾಶವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಕಾಫಿ ಬೆಳೆ (Coffee crop) ಉದುರುತ್ತಿದೆ. ಜೊತೆಗೆ ಕೊಳೆರೋಗ ಸಹ ಬಂದಿದ್ದು, ಬೆಳೆ ನೆಲಕಚ್ಚುತ್ತಿದೆ. ಇನ್ನೊಂದೆಡೆ ಕರಿಮೆಣಸು (Black pepper) ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಮರದಲ್ಲೇ ಒಣಗುತ್ತಿದೆ. ಅಳಿದುಳಿದ ಬೆಳೆ ಕುಯ್ಯಲು ಮಳೆ ಅಡ್ಡಿಯಾಗುತ್ತಿದ್ದು, ಕೂಲಿ ಕಾರ್ಮಿಕರು ಸಹ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷ ಕಾಫಿ ಬೆಳೆ (Coffee crop) ಚೆನ್ನಾಗಿತ್ತು. ಆದರೆ, ಬೆಲೆ ಕಡಿಮೆ ಇತ್ತು. ಈ ವರ್ಷ ಮಳೆ ಬಿದ್ದು ಬೆಳೆ ನಾಶವಾಗಿದೆ. ಪರಿಣಾಮ ಬ್ಯಾಂಕಿನಲ್ಲಿ ಮಾಡಿದ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಇಲ್ಲಿನ ರೈತರು ಒತ್ತಾಯಿಸಿದ್ದಾರೆ.