ಕೊಡಗು: ಮಡಿಕೇರಿಯ ಮಲ್ಲಿಕಾರ್ಜುನ ನಗರಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಅವರಿಗೆ ಉಸ್ತುವಾರಿ ಸಚಿವ ಬಿ ಸಿ ನಾಗೇಶ್, ಸಚಿವರಾದ ಆರ್.ಅಶೋಕ್, ಸಿ.ಸಿ.ಪಾಟೀಲ್ ಹಾಗೂ ಅಧಿಕಾರಿಗಳು ಸಾಥ್ ನೀಡಿದ್ರು.
ಮಳೆಗೆ ಮಲ್ಲಿಕಾರ್ಜುನ ನಗರದಲ್ಲಿ ಗೋಪಾಲ್ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಗೋಡೆ ಕುಸಿತದ ಶಬ್ದ ಕೇಳಿ ಮನೆಯಲ್ಲಿದ್ದ ಆರು ಮಂದಿ ಹೊರ ಬಂದ ಕಾರಣ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಮನೆಗೆ ಸಿಎಂ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಣೆ ಮಾಡಿದ್ರು. ಒಂದು ಲಕ್ಷ ಮತ್ತು 5 ಸಾವಿರದ ಚೆಕ್ ವಿತರಣೆ ನೀಡಿದ್ರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಹಾರಂಗಿ ಅಣೆಕಟ್ಟಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿದ್ರು. ಹಾರಂಗಿ ಅಣೆಕಟ್ಟೆಯ ನೀರು ಶೇಖರಣೆ ಮತ್ತು ನೀರು ಬಿಡುವ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ನೀರನ್ನು ಶೇಖರಣೆ ಮಾಡದಂತೆ ಸೂಚನೆ ನೀಡಿದ್ರು. ಜಿಲ್ಲೆಯ ಕುಶಾಲ ನಗರ ತಾಲೂಕಿನ 7ನೇ ಹೊಸಕೋಟೆ ಗ್ರಾಮದ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ಮಳೆಗೆ ಮನೆ ಕುಸಿದ ಮನೆ ಮಾಲೀಕರಿಗೆ ಸ್ಥಳದಲ್ಲೇ ಪರಿಹಾರ ಚೆಕ್ ವಿತರಿಸಿದರು.
ಇದನ್ನೂ ಓದಿ:ಗೋಕಾಕ್-ಶಿಂಗಳಾಪೂರ ಸೇತುವೆ ಮುಳುಗಡೆ; ಬ್ರಿಡ್ಜ್ ಮೇಲೆಯೇ ವಾಹನಗಳ ವಾಶಿಂಗ್, ಸಂಚಾರ!