ಮಡಿಕೇರಿ :ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡು ನಗರಸಭೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಲಾವಿದನ ಫೋಟೋ ಗ್ಯಾಲರಿಯನ್ನು ಇಂದು ಬೆಳ್ಳಂಬೆಳಗ್ಗೆ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ.
ಮಡಿಕೇರಿ ನಗರದ ಚೈನ್ ಗೇಟ್ ಬಳಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದ ಚಿತ್ರ ಕಲಾವಿದ ಹಾಗೂ ಕುಟುಂಬ ವರ್ಗದವರು ತೆರವು ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಹೈಡ್ರಾಮ ನಡೆಸಿದರು.
ಕಳೆದ ಬಾರಿಯು ತೆರವು ಕಾರ್ಯಚರಣೆ ಮಾಡಲು ಮುಂದಾದಾಗ ಚಿತ್ರಕಲಾವಿದ ಸಂದೀಪ್ ಮತ್ತು ಕುಟುಂಬದವರು ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ನಗರಸಭೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು.
ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಲಾವಿದನ ಫೋಟೋ ಗ್ಯಾಲರಿ ಬೆಳ್ಳಂಬೆಳಗ್ಗೆ ನಗರಸಭೆಯಿಂದ ತೆರವು ಆದರೆ, ಇಂದು ಮಡಿಕೇರಿ ತಹಶೀಲ್ದಾರ್ ಮಹೇಶ್, ನಗರಸಭೆ ಆಯುಕ್ತ ರಾಮದಾಸ್ ನೇತೃತ್ವದಲ್ಲಿ ಫೋಟೋ ಗ್ಯಾಲರಿ ತೆರವು ಕಾರ್ಯಾಚರಣೆ ಮಾಡಲಾಯಿತು. ಬೆಳಗ್ಗೆ 6.30ರ ಸುಮಾರಿಗೆ ನೂರಾರು ಪೊಲೀಸರೊಂದಿಗೆ ಆಗಮಿಸಿದ ನಗರಸಭೆ ಅಧಿಕಾರಿಗಳು ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಏಕಾಏಕಿ ಬಂದು ದೌರ್ಜನ್ಯ ನಡೆಸಿದ್ದಾರೆ ಎಂದು ಕಲಾವಿದನ ಕುಟುಂಬಸ್ಥರು ಆರೋಪಿಸಿದರಲ್ಲದೇ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯಿಂದ ಶಿಥಿಲಗೊಂಡ ಕಟ್ಟಡ ತೆರವು ಕಾರ್ಯಾಚರಣೆ