ಮಡಿಕೇರಿ:ಗ್ರಾಹಕ ಮತ್ತು ಚಪ್ಪಲಿ ಅಂಗಡಿ ಮಾಲೀಕನ ನಡುವಿನ ಜಗಳ ಅತಿರೇಕಕ್ಕೆ ತಲುಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಗೋಣಿಕೊಪ್ಪ ಪಟ್ಟಣದ ಚಪ್ಪಲಿ ಅಂಗಡಿಯಲ್ಲಿ ಬೆಲೆ ವಿಚಾರವಾಗಿ ಗ್ರಾಹಕ ಜಗಳ ತೆಗೆದನೆಂದು ಆತನ ಮೇಲೆ ಮಾಲೀಕ ಹಾಗೂ ಬೆಂಬಲಿಗರು ಗುಂಪು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಪ್ಪಲಿ ಬೆಲೆ ವಿಚಾರವಾಗಿ ಅಂಗಡಿ ಮಾಲೀಕನೊಂದಿಗೆ ಜಗಳ: ಗ್ರಾಹಕನಿಗೆ ರಸ್ತೆಯಲ್ಲೇ ಥಳಿಸಿದ್ರು! - ಗೋಣಿಕೊಪ್ಪ ಪಟ್ಟಣ
ಚಪ್ಪಲಿ ಬೆಲೆ ಕಡಿಮೆ ಮಾಡದ ಕ್ಷುಲ್ಲಕ ಕಾರಣಕ್ಕೆ ಮಾಲೀಕನೊಂದಿಗೆ ಜಗಳ ಮಾಡಿದ ಗ್ರಾಹಕನ ಮೇಲೆ ಮಾಲೀಕ ಹಾಗೂ ಆತನ ಬೆಂಬಲಿಗರು ಗುಂಪು ಹಲ್ಲೆ ನಡೆಸಿದ್ದಾರೆ.
ಗೋಣಿಕೊಪ್ಪ ನಿವಾಸಿ ಮೈಕೆಲ್ ಎಂಬುವರು ಚಪ್ಪಲಿ ಅಂಗಡಿ ಮಾಲೀಕ ಸಮೀರ್ ಹಾಗೂ ಸಂಬಂಧಿಕರಿಂದ ಹಲ್ಲೆಗೊಳಗಾದವರು. ಉಪಹಾರ್ ಫುಟ್‌ವೇರ್ ಅಂಗಡಿಗೆ ನಿನ್ನೆ ಮೈಕೆಲ್ ಹೋಗಿದ್ದ. 290 ರೂ. ಬೆಲೆಯ ಚಪ್ಪಲಿಯನ್ನು 250 ರೂ.ಗೆ ಕೊಡುವಂತೆ ಮಾಲೀಕ ಸಮೀರ್ ಬಳಿ ಚೌಕಾಸಿ ಮಾಡಿದ್ದ. ಅದಕ್ಕೆ ಸಮೀರ್ ಬೇಕಿದ್ರೆ ತಗೋ, ಇಲ್ಲವಾದರೆ ಹೊರಟು ಹೋಗುವಂತೆ ಹೇಳಿದ್ದನಂತೆ. ಆಗ ಮಾತಿಗೆ ಮಾತು ಬೆಳೆದು ತಳ್ಳಾಟ ನಡೆದಿತ್ತು ಎನ್ನಲಾಗ್ತಿದೆ.
ಇಂದು ಬೆಳಗ್ಗೆ ಮೈಕೆಲ್, ಸೂಪರ್ ಮಾರ್ಕೆಟ್‌ಗೆ ತನ್ನ ಹೆಂಡತಿಯನ್ನು ಬಿಡಲು ಬಂದಾಗ ಸಮೀರ್ ಮತ್ತು ಆತನ ಐದು ಜನ ಬೆಂಬಲಿಗರು ಏಕಾಏಕಿ ದಾಳಿ ಮಾಡಿದ್ದಾರೆ. ಹಲ್ಲೆಯಿಂದ ಮೈಕೆಲ್ ತಲೆ ಭಾಗಕ್ಕೆ ಗಾಯವಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.