ಮಡಿಕೇರಿ: ಮನೆಯಲ್ಲಿದ ಸೀರೆಯನ್ನು ಮನೆಯ ಮೇಲ್ಚಾವಣಿಗೆ ಜೋಕಾಲಿ ಕಟ್ಟಿ ಆಡುತ್ತಿದ್ದ ಮಕ್ಕಳು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲೂಕಿನ ಗಣಗೂರು ಉಂಜಿಗನಹಳ್ಳಿಯಲ್ಲಿ ನಡೆದಿದೆ.
ಉಂಜಿಗನಹಳ್ಳಿಯ ನಿವಾಸಿಗಳಾದ ರಾಜು ಹಾಗೂ ಜಯಂತಿ ದಂಪತಿಯ ಇಬ್ಬರು ಮಕ್ಕಳಾದ ಪ್ರತಿಕ್ಷ (14), ಪೂರ್ಣೆಶ್ (12) ಸಾವನ್ನಪ್ಪಿದ್ದಾರೆ. ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿರಬೇಕಾದರೆ, ಆಕಸ್ಮಿಕವಾಗಿ ಸೀರೆಯೇ ಕೊರಳಿಗೆ ಸುತ್ತಿಕೊಂಡು, ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ.