ಕೊಡಗು :ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಬಿದ್ದಿರುವ ಘಟನೆ ಮಡಿಕೇರಿ ತಾಲೂಕಿನ ಬಲಮುರಿ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಘಟನೆ ಬಳಿಕ ಕಾರಿನಲ್ಲಿದ್ದ ಚಾಲಕ ನಾಪತ್ತೆ ಆಗಿದ್ದಾನೆ.
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು.. ಅದೃಷ್ಟವಶಾತ್ ಬಚಾವಾದ ಪ್ರಯಾಣಿಕರು.. - ಮಡಿಕೇರಿ ತಾಲೂಕಿನ ಬಲಮುರಿ
ಮಡಿಕೇರಿ ತಾಲೂಕಿನ ಬಲಮುರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರನ್ನು ಕೂಡಲೇ ಸ್ಥಳೀಯರು ಮೇಲೆತ್ತಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು..
ಕೇರಳ ನೋಂದಣಿಯ ಶಿಫ್ಟ್ ಕಾರ್ ಇದಾಗಿದ್ದು, ಬಲಮುರಿ ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಬಿದ್ದಿದೆ. ಕೂಡಲೇ ಸ್ಥಳೀಯರು ಕಾರನ್ನು ಮೇಲೆತ್ತಿ ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.