ಕೊಡಗು :ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಆಗಿರುವುದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಎಲೆಕೋಸು ಮಣ್ಣುಪಾಲಾದ ಹಿನ್ನೆಲೆಯಲ್ಲಿ ರೈತರೊಬ್ಬರು ಹೊಲದಲ್ಲೇ ಗೋಳಾಡಿಕೊಂಡಿದ್ದಾರೆ.
ಬಾಯಿ ಬಾಯಿ ಬಡ್ಕೊಂಡ್, ನೆಲ ಬಡಿದು ಗೋಳಿಟ್ಟ ರೈತನ ಸಂಕಟ ಕಲ್ಲೆದೆಯನ್ನೂ ಕರಗಿಸುತ್ತೆ.. - ಎಲೆ ಕೋಸು
ಕಷ್ಟಪಟ್ಟು ಬೆಳೆದ ಬೆಳೆ ಹೀಗೆ ಆಯಿತಲ್ಲ ಎಂದು ರೈತ ಚಂದ್ರಶೆಟ್ಟಿ ಹತಾಶೆಗೊಳಗಾಗಿದ್ದಾರೆ. ಕನಿಷ್ಠ 10 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದ ರೈತ ಚಂದ್ರಶೆಟ್ಟಿ ವಾರದ ಹಿಂದೆಯೇ ಕಡಿದು ಮಾರಾಟ ಮಾಡಬೇಕಾಗಿತ್ತು.

ರೈತ ಚಂದ್ರಶೆಟ್ಟಿ
ಕಟಾವಿಗೆ ಬಂದ ಬೆಳೆ ಮಣ್ಣುಪಾಲು..
ಕುಶಾಲನಗರ ಸಮೀಪದ ಬ್ಯಾಡಗೊಟ್ಟ ಗ್ರಾಮದ ರೈತ ಚಂದ್ರಶೆಟ್ಟಿ ಅವರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿರುವ ಕೋಸು ಮಣ್ಣು ಪಾಲಾಗಿದೆ. ಲಾಕ್‍ಡೌನ್ ಆಗಿದ್ದರಿಂದ ಸುಮಾರು 5 ಎಕರೆಯಲ್ಲಿ ಬೆಳೆದಿರುವ ಎಲೆ ಕೋಸನ್ನು ಕಡಿದು ಮಾರಾಟ ಮಾಡಲಾಗದೆ ಹೊಲದಲ್ಲೇ ಕೊಳೆಯುತ್ತಿದೆ. ಕಷ್ಟಪಟ್ಟು ಬೆಳೆದ ಬೆಳೆ ಹೀಗೆ ಆಯಿತಲ್ಲ ಎಂದು ರೈತ ಚಂದ್ರಶೆಟ್ಟಿ ಹತಾಶೆಗೊಳಗಾಗಿದ್ದಾರೆ. ಕನಿಷ್ಠ 10 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದ ರೈತ ಚಂದ್ರಶೆಟ್ಟಿ ವಾರದ ಹಿಂದೆಯೇ ಕಡಿದು ಮಾರಾಟ ಮಾಡಬೇಕಾಗಿತ್ತು. ಆದರೆ, ಈಗ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ.