ಕೊಡಗು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕಿದ 8.5 ಕೋಟಿ ಹಣದ ಮೂಲ ಯಾವುದು ಎಂಬುದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಕ್ರಮವಾಗಿ ಹಣಕಾಸು ವರ್ಗಾವಣೆ ಆಗಿರುವ ಬಗ್ಗೆ ತನಿಖೆ ನಡೆಸುತ್ತಿದೆ. ಆದ್ದರಿಂದ ಜನರು ಭ್ರಷ್ಟಾಚಾರಿಗಾಗಿ ಬೀದಿಗೆ ಬರಬಾರದು, ಬದಲಿಗೆ ಭ್ರಷ್ಟಾಚಾರಿ ಬೀದಿಗೆ ಬರಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರಿ ಬೀದಿಗೆ ಬರಬೇಕೆ ಹೊರತು ಜನಾಂಗವಲ್ಲ, ಡಿಕೆಶಿ ಪರ ಪ್ರತಿಭಟನೆಗೆ ತಿರುಗೇಟು ನೀಡಿದ್ರಾ ಸಿ.ಟಿ.ರವಿ..? - ಒಕ್ಕಲಿಗ ಸಮುದಾಯ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಸಿಕ್ಕಿದ 8.5 ಕೋಟಿ ಹಣದ ಮೂಲ ಯಾವುದು ಎಂಬುದನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಕ್ರಮವಾಗಿ ಹಣಕಾಸು ವರ್ಗಾವಣೆ ಆಗಿರುವ ಬಗ್ಗೆ ತನಿಖೆ ನಡೆಸುತ್ತಿದೆ. ಆದ್ದರಿಂದ ಜನರು ಭ್ರಷ್ಟಾಚಾರಿಗಾಗಿ ಬೀದಿಗೆ ಬರಬಾರದು, ಬದಲಿಗೆ ಭ್ರಷ್ಟಾಚಾರಿ ಬೀದಿಗೆ ಬರಬೇಕು ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವುದು ಯಾವ ಜಾತಿ ಎಂಬುದರ ಆಧಾರದ ಮೇಲೆ ಅಲ್ಲ. ಆ ಇಲಾಖೆಗೆ ಯಾವ ಜಾತಿಯೂ ಇಲ್ಲ ಎಂಂದಿದ್ದು, ಅಸಹಜವಾಗಿ ಅರ್ಥಿಕ ಬೆಳವಣಿಗೆಯಾದರೆ ಅದು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ಜನರು ಭ್ರಷ್ಟಾಚಾರಿಗಾಗಿ ಬೀದಿಗೆ ಬರಬಾರದು, ಬದಲಿಗೆ ಭ್ರಷ್ಟಾಚಾರಿ ಬೀದಿಗೆ ಬರಬೇಕು ಎಂದರು.
ಒಕ್ಕಲಿಗ ಸಮುದಾಯ ಮುಂಖಡರಿಗೆ ಮನವಿ ಮಾಡುತ್ತೇನೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಯಾರು ಪ್ರಶ್ನೆ ಮಾಡಬೇಕು..? ನಾಳೆ ನನ್ನ ಮನೆಯಲ್ಲೇ 50 ಕೋಟಿ ಹಣ ಸಿಕ್ಕಿದರೆ ಜಾತಿಯ ಆಧಾರದಲ್ಲಿ ರಕ್ಷಣೆ ಮಾಡಲು ಬರುತ್ತಾ.? ಪ್ರಾಮಾಣಿಕರ ಮನೆಯಲ್ಲಿ ಕೋಟಿಗಟ್ಟಲೆ ಹಣ ಇರುವುದಕ್ಕೆ ಸಾದ್ಯವೇ?. ಈ ಪ್ರಶ್ನೆಗೆ ಸಮುದಾಯ ಉತ್ತರ ಹುಡುಕಬೇಕಾಗಿದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ಯಾವುದೇ ಪಕ್ಷದ ನಾಯಕನಾಗಿರಲಿ ಭ್ರಷ್ಟಾಚಾರ ಮಾಡಿದ್ದರೆ ಅದು ತಪ್ಪೆ. ಭ್ರಷ್ಟಾಚಾರಕ್ಕೆ ಜಾತಿ ಎಂಬುದಿಲ್ಲ ಎಂದು ಬೆಂಗಳೂರಿನಲ್ಲಿ ಒಕ್ಕಲಿಗರು ನಡೆಸಿದ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.