ಕೊಡಗು:ರಸ್ತೆ ದಾಟುತ್ತಿದ್ದ ವೃದ್ಧೆ ಮೇಲೆ ರಾಜ್ಯ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾತೂರು ಬಳಿ ನಡೆದಿದೆ.
ಬಸ್ ಅಪಘಾತ: ವೃದ್ಧೆ ಸ್ಥಳದಲ್ಲೇ ಸಾವು
ಕೊಡಗು:ರಸ್ತೆ ದಾಟುತ್ತಿದ್ದ ವೃದ್ಧೆ ಮೇಲೆ ರಾಜ್ಯ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾತೂರು ಬಳಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಹಾತೂರು ನಿವಾಸಿ ತಂಗಮ್ಮ (76) ಮೃತ ಮಹಿಳೆ. ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ರಸ್ತೆ ದಾಟುವಾಗ ಯಮ ಸ್ವರೂಪಿಯಾಗಿದೆ ಮೇಲೆರಗಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.