ಮಡಿಕೇರಿ: ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಗಜಗಿರಿಬೆಟ್ಟ ಕುಸಿದು ಕಣ್ಮರೆಯಾಗಿದ್ದ ಶಾಂತಾ ಆಚಾರ್ ಮತ್ತು ಶ್ರೀನಿವಾಸ್ ಪಡಿಲ್ಲಾಯ ಅವರ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬ್ರಹ್ಮಗಿರಿಯ ಗಜಗಿರಿಬೆಟ್ಟ ಕುಸಿತ ಪ್ರಕರಣ: ವಿಶೇಷ ಮರಣ ಪರಿಹಾರ ಬಿಡುಗಡೆ ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಪತ್ನಿ ಶಾಂತಾ ಆಚಾರ್ ಕೂಡ ಆಗಸ್ಟ್ 05 ರಂದು ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು. ಬಳಿಕ ಸತತ 12 ದಿನಗಳ ಕಾಲ ಕಾರ್ಯಾಚರಣೆ ನಡೆಸಿದರೂ ಶಾಂತಾ ಆಚಾರ್ ಪತ್ತೆಯಾಗಿರಲಿಲ್ಲ. ಜೊತೆಗೆ ಸಹಾಯಕ ಅರ್ಚಕರಾಗಿದ್ದ ಮಂಗಳೂರಿನ ಶ್ರೀನಿವಾಸ್ ಪಡಿಲ್ಲಾಯ ಕೂಡ ಕಣ್ಮರೆಯಾಗಿದ್ದರೂ ಪತ್ತೆಯಾಗಿರಲಿಲ್ಲ.
ಕೊನೆಗೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಇಲಾಖೆಯ ತಂಡಗಳು ಜಿಲ್ಲಾಡಳಿತದ ನಿರ್ದೇಶನದಂತೆ ಕಾರ್ಯಾಚರಣೆ ನಿಲ್ಲಿಸಿದ್ದವು. ಕೊನೆಗೆ ಭೂಕುಸಿತದಲ್ಲಿ ನಾಪತ್ತೆಯಾಗಿರುವುದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಸರ್ಕಾರ ಇಬ್ಬರಿಗೂ ಪ್ರಾಕೃತಿಕ ವಿಕೋಪದಲ್ಲಿ ಮೃತಪಟ್ಟವರೆಂದು ಪರಿಹಾರ ಘೋಷಿಸಿತ್ತು.
ಇದೀಗ ಪರಿಹಾರದ ಹಣ ಬಿಡುಗಡೆಯಾಗಿದ್ದು, ನಾಳೆ ಶಾಸಕರ ನಿರ್ದೇಶನದಂತೆ ನಾರಾಯಣ ಆಚಾರ್ ಅವರ ಮಕ್ಕಳಾದ ಶಾಂತಾ ಆಚಾರ್ ಮತ್ತು ನಮಿತಾ ಆಚಾರ್ಗೆ ಪರಿಹಾರದ ಹಣ ನೀಡಲಾಗುವುದು ಎಂದು ತಹಶೀಲ್ದಾರ್ ಹೇಳಿದ್ದಾರೆ. ಅಲ್ಲದೆ ಶ್ರೀನಿವಾಸ್ ಪಡಿಲ್ಲಾಯ ಅವರ ಪೋಷಕರಿಗೂ ಪರಿಹಾರದ ಹಣವನ್ನು ನೀಡುವುದಾಗಿ ಹೇಳಿದ್ದಾರೆ.