ಕೊಡಗು:ಕಾನೂನು ಉಲ್ಲಂಘನೆ ಆಗಬಾರದೆಂಬ ದೃಷ್ಟಿಯಿಂದ ಜನಜಾಗೃತಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ರಾಬೀಮ್ ದೇವಯ್ಯ ಹೇಳಿದರು. ಆ.26 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜನ ಜಾಗೃತಿ ಸಮಾವೇಶವಕ್ಕೆ ಕರೆ ನೀಡಲಾಗಿತ್ತು.
ಕಾನೂನು ಉಲ್ಲಂಘನೆಯ ದೃಷ್ಟಿಯಿಂದ ಜನಜಾಗೃತಿ ಸಮಾವೇಶ ಮುಂದೂಡಿಕೆ: ರಾಬೀಮ್ ದೇವಯ್ಯ - Etv Bharat Kannada
26ನೇ ತಾರೀಖಿನಂದು ಮಡಿಕೇರಿಯಲ್ಲಿ ಬಿಜೆಪಿ ಪಕ್ಷದಿಂದ ಜನಜಾಗೃತಿ ಸಮಾವೇಶವ ಏರ್ಪಡಿಸಲಾಗಿತ್ತು.
ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ
ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಭಟನೆಯನ್ನು ವಾಪಸ್ ಪಡೆದಿದ್ರೂ ಕೂಡ ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಗೆ ಬರುವ ಎಲ್ಲಾ ಚೆಕ್ ಪೋಸ್ಟ್ನಲ್ಲೂ ಕೂಡಾ ತಪಾಸಣೆ ಮಾಡಲಾಗುತ್ತಿದ್ದು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೋಂ ಸ್ಟೇ, ಹೋಟೆಲ್, ರೆಸಾರ್ಟ್ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಕೊಡಗಿನ ಕಾಳಗಕ್ಕೆ ನಿಷೇಧಾಜ್ಞೆ ಬ್ರೇಕ್: ಆ.26ರ ಕಾಂಗ್ರೆಸ್ ಪ್ರತಿಭಟನೆ, ಬಿಜೆಪಿ ಸಮಾವೇಶ ಮುಂದಕ್ಕೆ