ಕರ್ನಾಟಕ

karnataka

ETV Bharat / state

ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕೈದಿಗೆ ಗೆಲುವು - ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕೈದಿಗೆ ಗೆಲುವು

ಸತತ ನಾಲ್ಕನೇ ಬಾರಿಗೆ ಜಯಭೇರಿ ಸಾಧಿಸಿರುವ ಬೋಪಣ್ಣ ಕೊನೆ ಕ್ಷಣದಲ್ಲಿ ಪಾಲಿಬೆಟ್ಟ ಪಂಚಾಯಿತಿ ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧಿಸಿ ಜೈಲಿನಿಂದ ಬಿಡುಗಡೆಯಾಗಿ ಪ್ರಚಾರ ನಡೆಸಿದ್ದರು.

BJP candidate Bopanna
ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೋಪಣ್ಣ

By

Published : Dec 30, 2020, 12:02 PM IST

Updated : Dec 30, 2020, 12:18 PM IST

ಕೊಡಗು:ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.‌

ವಿರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಕ್ಷೇತ್ರದ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ. ಸತತ ನಾಲ್ಕನೇ ಬಾರಿಗೆ ಜಯಭೇರಿ ಸಾಧಿಸಿರುವ ಬೋಪಣ್ಣ ಕೊನೆ ಕ್ಷಣದಲ್ಲಿ ಪಾಲಿಬೆಟ್ಟ ಪಂಚಾಯಿತಿ ಎಮ್ಮೆಗುಂಡಿ ವಾರ್ಡ್‌ನಿಂದ ಸ್ಪರ್ಧಿಸಿ ಜೈಲಿನಿಂದ ಬಿಡುಗಡೆಯಾಗಿ ಪ್ರಚಾರ ನಡೆಸಿದ್ದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಜಯಭೇರಿ

ಅಕ್ಕನ ವಿರುದ್ಧ ತಂಗಿ ಭರ್ಜರಿ ಗೆಲುವು: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿಯಲ್ಲಿ ಅಕ್ಕನ ವಿರುದ್ಧ ತಂಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.‌ ಬಿಳಿಗೇರಿ ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಜಯಭೇರಿ ಭಾರಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಮಾವತಿ ಕೇವಲ 80 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.

Last Updated : Dec 30, 2020, 12:18 PM IST

ABOUT THE AUTHOR

...view details