ಕೊಡಗು:ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದವರೆಗೆ ವಿಶೇಷ ಜಾಥಾ ನಡೆಯತು.
ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಬೆಂಗಳೂರಿನಿಂದ-ಕೊಡಗಿಗೆ ಬೈಕ್ ಜಾಥಾ - Bike rally
ಕೊಡವ ರೈಡರ್ಸ್ ಕ್ಲಬ್, ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರನ್ನು ಉಳಿಸಿ ಎನ್ನುವ ಉದ್ದೇಶದಿಂದ ಬೆಂಗಳೂರಿನಿಂದ-ಜಿಲ್ಲೆಯ ಗೋಣಿಕೊಪ್ಪದ ಕಾವೇರಿ ಕಾಲೇಜಿನವರೆಗೆ ನೂರಾರು ಬೈಕ್‌ಗಳು ಹಾಗೂ ಇತರೆ ವಾಹನಗಳ ಮೂಲಕ ಜಾಥಾ ನಡೆಯಿತು.

ಬೈಕ್ ಜಾಥಾ
ಬೆಂಗಳೂರಿನಿಂದ-ಕೊಡಗಿನವರೆಗೆ ಬೈಕ್ ಜಾಥಾ
ಜಾಥದಲ್ಲಿ ಜಿಲ್ಲೆಯ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು, ಕನಿಷ್ಠ10 ಎಕರೆ ಕಾಫಿತೋಟ ಹೊಂದಿದವರಿಗೆ ಉಚಿತವಾಗಿ 10 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಲು ಅನುಮತಿ ಕೊಡುವುದು ಸೇರಿದಂತೆ ಸಂಕಷ್ಟದಲ್ಲಿರುವ ರೈತರನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.