ಕೊಡಗು: ಡ್ಯಾನ್ಸ್ ಕಲಿಸಿ ಕೊಡ್ತೇನೆಂದು ಕ್ಲಾಸ್ಗೆ ಕರೆಯಿಸಿದವ ಬಳಿಕ ತನ್ನನ್ನೇ ಪ್ರೀತಿಸುವಂತೆ ಅಸಭ್ಯವಾಗಿ ವರ್ತಿಸಿದ್ದ. ಆದರೆ, ಅಪ್ರಾಪ್ತೆಯೊಬ್ಬಳು ಒಪ್ಪದಿದ್ದಾಗ ಆಕೆಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸೊಮವಾರಪೇಟೆ ತಾಲೂಕು ಶನಿವಾರಸಂತೆಯ ಸಲ್ಮಾನ್ ಎಂಬ ಯುವಕನ ಮೇಲೆ ಈ ಆರೋಪ ಕೇಳಿ ಬಂದಿದೆ. ಈತ ಯುವತಿಯನ್ನು ತಾನು ಶನಿವಾರಸಂತೆಯಲ್ಲಿ ನಡೆಸುತ್ತಿದ್ದ ಡ್ಯಾನ್ಸ್ ಶಾಲೆಗೆ ಬರಲು ಹೇಳಿದ್ದನಂತೆ. ಆಕೆ ಬಂದ ನಂತರ ಪ್ರೀತಿಸುವಂತೆ ಒತ್ತಾಯ ಮಾಡಿದ್ದನಂತೆ. ಪ್ರೀತಿಸಲು ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.