ಕೊಡಗು:ಕಾಂಗ್ರೆಸ್ನ ಬಿ. ಕೆ ಹರಿಪ್ರಸಾದ್ ಗೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆ ಇಲ್ಲ. ಅವರೇನು ಚುನಾವಣೆ ಎದುರಿಸಿ ನಾಯಕರಾದವರಲ್ಲ. ಕಾಂಗ್ರೆಸ್ಗೆ ಈ ರೀತಿಯ ಪಾದಯಾತ್ರೆ ಹೊಸತು. ಬಿಜೆಪಿಗೆ ಅಲ್ಲ. ಭಾರತ್ ಜೋಡೊ ಬಿಜೆಪಿಗೆ ಭಯ ಹುಟ್ಟಿದೆ ಎಂಬ ಹರಿಪ್ರಸಾದ್ ಹೇಳಿಕೆ ವಿಚಾರ ಸಂಬಂಧಿಸಿದಂತೆ ಕೊಡಗು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಕ್ಷ ಕಟ್ಟಿದೆ. ಪಾದಯಾತ್ರೆ ಮೂಲಕ ಬಿಜೆಪಿ ಸ್ಥಾಪನೆಯಾಗಿದೆ. ಜನರ ಸಮಸ್ಯೆ ಬಗೆಹರಿಸುವ ಮೂಲಕ ಬಿಜೆಪಿ ಈ ರೀತಿಯ ಸಾಕಷ್ಟು ಅಭಿಯಾನಗಳನ್ನ ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ಹಿಂದೆ ಸಾಕಷ್ಟು ಪಾದಯಾತ್ರೆ ಮಾಡುವ ಮೂಲಕ ಗಮನ ಸೆಳೆದಿದ್ರು. ಸಂಘಟನೆಯನ್ನು ಮಾಡಿದ್ದಾರೆ.
ಬಿಜೆಪಿ ಪಕ್ಷದಿಂದ ಸಮಸ್ಯೆಗಳನ್ನು ಕೇಳುವ ಪಾದಯಾತ್ರೆ ಮಾಡುತ್ತೇವೆ. ಕಾಂಗ್ರೆಸ್ ಈಗ ಭಾರತ್ ಜೋಡೊ ಯಾತ್ರೆ ಮಾಡುತ್ತಿದೆ ಅಂತ ನಾವು ಪಾದಯಾತ್ರೆ ಮಾಡೋದಿಲ್ಲ. ಕಾಂಗ್ರೆಸ್ಗೆ ಹೆದರಿ ನಾವು ಪಾದಯಾತ್ರೆ ಮಾಡ್ತಾ ಇಲ್ಲ. ಕಾಂಗ್ರೆಸ್ನವರೇ ನಮ್ಮನ್ನ ಕಾಫಿ ಮಾಡಿರೋದು. ಅವರು ಈ ಪಾದಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಜನ ಹೇಗಿದ್ದಾರೆ ಟೀ ಅಂಗಡಿ ಹೇಗಿದೆ? ಎಂಬುದನ್ನ ಈಗ ನೋಡ್ತಾ ಇದ್ದಾರೆ ಎಂದು ಮಡಿಕೇರಿಯಲ್ಲಿ ಬಿ.ಸಿ ನಾಗೇಶ್ ಅವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನದು ಬಾಸ್ ಇಸ್ ಆಲ್ ವೇಸ್ ರೈಟ್ ಎಂಬ ಸಂಸ್ಕೃತಿ:ಬಾಸ್ ಎಂಬುದು ಇಲ್ಲಿ ಒಂದು ಕುಟುಂಬ ಅಷ್ಟೇ. ಕಾಂಗ್ರೆಸ್ ಒಡೆದು ಆಳುವ ನೀತಿಯಲ್ಲೆ ಬೆಳೆದು ಬಂದಿರೋದು ಇವರು, ಬರೀ ಕಾಂಗ್ರೆಸ್ ಒಡೆಯಲ್ಲಿಲ್ಲ, ದೇಶವನ್ನೂ ಕೂಡ ಒಡೆದಿದ್ದಾರೆ. ಬ್ರಿಟೀಷರು ಯಾವ ರೀತಿ ಭಾರತವನ್ನ ಒಡೆದರೋ ಕಾಂಗ್ರೆಸ್ ಕೂಡ ಅದೇ ಹಾದಿ ಹಿಡಿದಿದೆ.