ಮಡಿಕೇರಿ:ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ನಿನ್ನೆ ರಾತ್ರಿ ಮನೆಯವರಿಗೆ ಕರೆ ಮಾಡಿ ತಿಳಿಸಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದ ಹೊರಹೊಲಯದ ಕೂಟ್ಟುಕೊಳೆ ಎಂಬಲ್ಲಿ ನಡೆದಿದೆ. ಆಜಾದ್ ನಗರ ನಿವಾಸಿ ಆಟೋ ಡ್ರೈವರ್ ಸೈಫು (31) ಮೃತಪಟ್ಟ ವ್ಯಕ್ತಿ.
ಸೈಫುವಿನ ಕರೆ ಬಂದ ಬಳಿಕ ಮನೆಯವರು ಮಡಿಕೇರಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಹೊರ ವಲಯದ ಕೂಟ್ಟು ಹೊಳೆಯದಲ್ಲೆಲ್ಲ ಜಾಲಾಡಿದಾಗ, ಹೊಳೆಯ ಬದಿ ಆಟೋ ಪತ್ತೆಯಾಗಿತ್ತು. ಕೂಟು ಹೊಳೆ ಬದಿಯಲ್ಲಿ ನಿಲ್ಲಿಸಿದ್ದ ಆಟೋದಲ್ಲಿ ಮೊಬೈಲ್, ಪರ್ಸ್ ಸಿಕ್ಕಿದೆ. ತಕ್ಷಣವೇ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.