ಮಡಿಕೇರಿ(ಕೊಡಗು):ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಬಂದೂಕು ನಿಂದ ಗುಂಡು ಹಾರಿಸಿ ಕೊಲೆ ಯತ್ನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ. ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ನಡೆದಿದೆ.
ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿ ಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಗಾಯಗಳಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪ ಕೇಳಿ ಬಂದಿದೆ. ತೀರ್ಥ ಪಿಕ್ - ಅಪ್ ಚಲಾಯಿಸುತ್ತಿದ್ದ ವೇಳೆ ಗುಂಡು ಹಾರಿಸಿದ್ದರಿಂದ ವಾಹನಕ್ಕೆ ಬುಲೆಟ್ ತಗುಲಿದೆ. ಗುಂಡು ವಾಹನದ ಸೀಳಿದೆ. ಈ ಶೂಟೌಟ್ನಲ್ಲಿ ತೀರ್ಥನ ಕೈಗೆ ಗಾಯವಾಗಿದೆ.