ಕರ್ನಾಟಕ

karnataka

ETV Bharat / state

ಪ್ರೇಯಸಿ ಮತ್ತು ಆಕೆಯ ಜೊತೆಗಿದ್ದ ಪ್ರಿಯಕರನಿಗೆ ಚಾಕುವಿನಿಂದ ಇರಿದ ಭಗ್ನ ಪ್ರೇಮಿ - ಕೊಡಗು ಭಗ್ನ ಪ್ರೇಮಿ

ಕುಶಾಲನಗರ ತಾಲ್ಲೂಕಿನ ಪ್ರವಾಸಿ ತಾಣ ನಿಸರ್ಗಧಾಮ ನೋಡಿಕೊಂಡು ಬರುತ್ತಿದ್ದ ಪ್ರೇಮಿಗಳಿಬ್ಬರಿಗೆ ಚಾಕುವಿನಿಂದ ಇರಿದ ಪಾಗಲ್​ ಪ್ರೇಮಿ.

KN_mdk_crime
ಘಟನೆ ನಡೆದ ಜಾಗ

By

Published : Aug 13, 2022, 7:52 PM IST

ಕೊಡಗು:ತ್ರಿಕೋನ ಪ್ರೇಮ ಪ್ರಕರಣ ಪ್ರೇಯಸಿ ಹಾಗೂ ಜೊತೆಯಲ್ಲಿದ್ದ ಇನ್ನೊಬ್ಬ ಪ್ರಿಯಕರನಿಗೆ ಚಾಕು ಇರಿದ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಸ್ಥಳೀಯರ ಸಹಾಯದಿಂದ ಬಂಧಿಸಲಾಗಿದೆ.

ಕುಶಾಲನಗರ ತಾಲ್ಲೂಕಿನ ಪ್ರವಾಸಿ ತಾಣ ನಿಸರ್ಗಧಾಮದಲ್ಲಿ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರು ನಿಸರ್ಗಧಾಮ ನೋಡಿಕೊಂಡ ಬರುವಾಗ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಪ್ರಿಯಕರನಿಗೆ ಚಾಕು ಇರಿದಿದ್ದು, ನಂತರ ಬಿಡಿಸಲು ಬಂದ ಆತನ ಪ್ರೇಯಸಿಗೂ ಚಾಕುವಿನಿಂದ ಇರಿದಿದ್ದಾನೆ.

ನಿಸರ್ಗಧಾಮದಲ್ಲಿ ಚಾಕು ಇರಿತ

ಬಳಿಕ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಇಬ್ಬರು ಕುಶಾಲನಗರದ ಸರಕಾರಿ‌ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಆರೋಪಿ ವಿಜಯ್ ಹೋಟೆಲ್​ನ ಸಪ್ಲೈಯರ್​ ಆಗಿ ಕೆಲಸ ಮಾಡುತ್ತಿದ್ದ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮರ್ಯಾದಾ ಹತ್ಯೆ: ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

ABOUT THE AUTHOR

...view details