ಕೊಡಗು: ಕೋವಿಡ್ ನಿಯಮಗಳು ಜಾರಿಯಲ್ಲಿದ್ರೂ ಪ್ರವಾಸಿಗರು ಕೊಡಗಿಗೆ ಬರುತ್ತಿದ್ದು, ಹೋಂಸ್ಟೇಯಲ್ಲಿ ತಂಗುತ್ತಿದ್ದಾರೆ. ಇಂತಹ ಹೋಂಸ್ಟೇವೊಂದರ ಮೇಲೆ ಪೊಲೀಸರು ದಾಳಿ ಮಾಡಿ ಸೀಲ್ ಮಾಡಿದ್ದು, ಅಲ್ಲಿ ತಂಗಿದ್ದ ಪ್ರವಾಸಿಗರಿಗೆ ದಂಡ ವಿಧಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕೋವಿಡ್ ನಿಯಮ ಜಾರಿಯಲ್ಲಿದ್ದರೂ ಪ್ರವಾಸಿಗರು ಬರುತ್ತಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಬೇಕು. ಹೊರಗಿನಿಂದ ಬರುವ ಪ್ರವಾಸಿಗರನ್ನು ತಡೆಯಬೇಕು ಎಂದು ಕರವೇ ಸಂಘಟನೆ ಜಿಲ್ಲಾಡಳಿತವನ್ನು ಮನವಿ ಮಾಡಿದೆ.
ಕೊಡಗಿನ ಹೋಂ ಸ್ಟೇ ಮೇಲೆ ಪೊಲೀಸರಿಂದ ದಾಳಿ ಕೊಡಗಿನಲ್ಲಿ ಜುಲೈ 6 ರವರೆಗೆ ಲಾಕ್ ಡೌನ್ :
ಕೊಡಗಿನಲ್ಲಿ ಲಾಕ್ ಡೌನ್ ಜುಲೈ 6 ರವರೆಗೆ ಮುಂದುವರೆದಿದ್ದು, ವಾರದಲ್ಲಿ ಮೂರು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ನಗರದ ಗಡಿಯಲ್ಲಿ ಅನಗತ್ಯವಾಗಿ ಆಗಮಿಸುತ್ತಿರುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಮಡಿಕೇರಿ ನಗರದ ಸಂಪಿಕಟ್ಟೆ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದು, ಬೇಕಾಬಿಟ್ಟಿ ನಗರಕ್ಕೆ ಬರುವವರಿಗೆ ದಂಡ ವಿಧಿಸಿದ್ದಾರೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಪೊಲೀಸರು ಕಟ್ಟುನಿಟ್ಟಿನ ನಿಯಮ ಮಾಡಿದ್ದು ಹೊರ ಜಿಲ್ಲೆಯಿಂದ ಕೊಡಗಿನತ್ತ ಆಗಮಿಸೋ ಪ್ರವಾಸಿಗರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಹೊರ ಜಿಲ್ಲೆಗಳಿಂದ ಆಗಮಿಸುವವರನ್ನು ತಪಾಸಣೆ ನಡೆಸಿ ವಾಪಸ್ ಕಳುಹಿಸಲಾಗುತ್ತಿದೆ.
ಇದನ್ನೂ ಓದಿ: ಭಾವನಾತ್ಮಕ ಮೌಲ್ಯಗಳಿರುವ ಗಡಿ ಗ್ರಾಮಗಳ ಹೆಸರು ಬದಲಾವಣೆ ಬೇಡ: ಕೇರಳ ಸಿಎಂಗೆ ಬಿಎಸ್ವೈ ಪತ್ರ