ಕರ್ನಾಟಕ

karnataka

ETV Bharat / state

ಸಾರಾಯಿ ತಯಾರಿಕೆ ಅಡ್ಡೆ ಮೇಲೆ ದಾಳಿ: ಸಾವಿರಾರು ಲೀ. ಮದ್ಯ ವಶ - kannada newspaper

ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರಿಗೆ ಮದ್ಯ ಹಂಚಿಕೆ ಮಾಡುತ್ತಿರುವ ಅಕ್ರಮ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಅಬಕಾರಿ ಇಲಾಖೆಯಿಂದ ಸಾರಾಯಿ ತಯಾರಿಕೆ ಅಡ್ಡೆ ಮೇಲೆ ದಾಳಿ

By

Published : Mar 26, 2019, 8:28 PM IST

ಕೊಡಗು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುವವರಿಗೆ ಅಬಕಾರಿ ಇಲಾಖೆ ಸಿಂಹ ಸ್ವಪ್ನ ವಾಗಿದೆ. ಜಿಲ್ಲೆಯ ವಿವಿಧೆಡೆ ಹಗಲು ರಾತ್ರಿ ಎನ್ನದೆ ದಾಳಿ ನಡೆಯುತ್ತಿದ್ದು ಸಾವಿರಾರು ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗುತ್ತದೆ.

ಚುನಾವಣೆ ಘೋಷಣೆ ಆಗುತ್ತಿದ್ದಂತೆ ಅಬಕಾರಿ ಇಲಾಖೆ ಹೈ ಅಲರ್ಟ್ ಆಗಿದೆ. ಚೆಕ್​ ಪೋಸ್ಟ್​ಗಳಲ್ಲಿ ವಾಹನಗಳ ತಪಾಸಣೆ ವೇಳೆ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯುತ್ತಿದ್ದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಮತದಾರರಿಗೆ ಹಂಚಿಕೆ ಮಾಡಲೆಂದು ನಿರ್ಮಾಣವಾದಅಕ್ರಮ ಸಾರಾಯಿ ತಯಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ಚುನಾವಣೆ ಘೋಷಣೆ ಆದ ದಿನದಿಂದ ಇಲ್ಲಿವರೆಗೆ ಬರೋಬ್ಬರಿ 42 ಪ್ರಕರಣ ದಾಖಲಾಗಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತಿರುವ ಜಿಲ್ಲೆಯ, ಸಂಪಾಜೆ, ಪೆರಾಜೆ, ದಬ್ಬಡ್ಕ, ಚೆಂಬು ಗ್ರಾಮಗಳಲ್ಲಿ ಅತೀ ಹೆಚ್ಚಿನ ಪ್ರಕರಣ ದಾಖಲಾಗಿದೆ. ಇತ್ತ ಸೋಮವಾರಪೇಟೆ ತಾಲೂಕಿನ ಕ್ಯಾತೆ, ಆಲೂರು, ಸಿದ್ದಾಪುರ, ಹೆಬ್ಬಾಲೆ, ಬಾಣಾವರದಲ್ಲಿ ತಯಾರಿಸಲಾಗುತ್ತಿದೆಯಂತೆ.

ಇಷ್ಟು ದಿನ ಒಂದೆರೆಡು ಬಾಟಲಿಗಳನ್ನು ತಯಾರಿಸಿ ತಮ್ಮ ಸ್ವಂತ ಖರ್ಚಿಗೆ ಬಳಸುತ್ತಿದ್ದ ತಯಾರಕರು ಇದೀಗ ಬ್ಯಾರಲ್ ಗಟ್ಟಲೆ ತಯಾರಿಸಿ ಚುನಾವಣೆ ಉದ್ದೇಶದಿಂದ ಸರಬರಾಜು ಮಾಡುತಿರುವವರ ಹಿಂದೆ ಸಾರಾಯಿ ಮಾಫಿಯಾ ಇದೆಯೇ ಎನ್ನುವ ಶಂಕೆ ಜನರಲ್ಲಿ ವ್ಯಕ್ತವಾಗುತ್ತಿದೆ.

ABOUT THE AUTHOR

...view details