ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ; ಪ್ರಾಣಾಪಾಯದಿಂದ ಪಾರು - kodagu news '

ಸಿದ್ದಾಪುರದ ಸಮೀಪದ ಕುಂಬಾರಗುಂಡಿ ನಿವಾಸಿಯಾಗಿರುವ ಸುಮಿತ್ರ ಮತ್ತು ಚಾಲಕ ಕುಟ್ಟನ್ ಎಂಬವರು ಅಕ್ಕಪಕ್ಕದ ಮನೆಯವರಾಗಿದ್ದು, ಜಾಗದ ವಿಚಾರಕ್ಕೆ ಕುಟ್ಟನ್​ ಮಹಿಳೆ ಮೇಲೆ ಈ ದಾಳಿ ನಡೆಸಿದ್ದಾನೆ.

Assault on woman for trivial reason in kodagu
ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ

By

Published : Sep 30, 2021, 10:11 PM IST

ಕೊಡಗು: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ವಿರಾಜಪೇಟೆ ತಾಲೂಕಿನ ನೆಲ್ಯಹುದಿಕೇರಿ ಎಂ.ಜಿ ಕಾಲೋನಿಯಲ್ಲಿ ಹಲ್ಲೆ ಘಟನೆ ನಡೆದಿದೆ.

ಸುಮಿತ್ರ (42) ಹಲ್ಲೆಗೊಳಗಾದ ಮಹಿಳೆ ಮುಖಕ್ಕೆ ಕತ್ತಿಯಿಂದ ಹಲ್ಲೆ ಮಾಡಲಾಗಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ನೆಲ್ಯಹುದಿಕೇರಿ ಕುಟ್ಟನ್ ಪೊಲೀಸರಿಗೆ ಶರಣಾಗಿದ್ದಾನೆ.

ಏನಿದು ಘಟನೆ?

ಸಿದ್ದಾಪುರದ ಸಮೀಪದ ಕುಂಬಾರಗುಂಡಿ ನಿವಾಸಿಯಾಗಿರುವ ಸುಮಿತ್ರ ಮತ್ತು ಚಾಲಕ ಕುಟ್ಟನ್ ಎಂಬವರು ಅಕ್ಕಪಕ್ಕದ ಮನೆಯವರಾಗಿದ್ದು, ಜಾಗದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಸ್ವಲ್ಪ ಸಮಯದ ನಂತರ ಇಬ್ಬರೂ ಸುಮ್ಮನಾಗಿದ್ದಾರೆ. ಆದರೆ, ಮಧ್ಯಾಹ್ನದ ವೇಳೆ ಮಹಿಳೆ ಮನೆಯಿಂದ ನೆಲ್ಲಿ ಉದಿಕೇರಿಗೆ ಬಂದಿದ್ದಾರೆ. ಆಕೆ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲೇ ಇದ್ದ ಸ್ಥಳೀಯರು ಆತನನ್ನು ತಡೆಹಿಡಿದು ಮುಂದಾಗುತ್ತಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ABOUT THE AUTHOR

...view details