ಕುಶಾಲನಗರ(ಕೊಡಗು) :ಕರ್ನಾಟಕ ಸಾರಿಗೆ ನೌಕರರ ಮುಷ್ಕರದ ನಡುವೆಯೇ ಪ್ರಯಾಣಿಕರ ಅನುಕೂಲಕ್ಕೆ ಖಾಸಗಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಈ ನಡುವೆ ಕೆಲವು ಸಾರಿಗೆ ನೌಕರರು ಕರ್ತವ್ಯಕ್ಕೆ ಸಹ ಹಾಜರಾಗುತ್ತಿದ್ದಾರೆ. ಆದರೆ ಕುಶಾಲನಗರದಲ್ಲಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ.
ನಿನ್ನೆ ಮೈಸೂರಿನಿಂದ ಪುತ್ತೂರು ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿ ಸುಮಾರು 10 ಜನ ಸಾರಿಗೆ ಸಿಬ್ಬಂದಿ ಅಡ್ಡಗಟ್ಟಿ ಬಸ್ ಚಾಲಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.