ಕೊಡಗು: ಜಿಲ್ಲಾ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಅವರಿಗೆ ಮನವಿ ಸಲ್ಲಿಸಿ ಕನಿಷ್ಠ ಗೌರವಧನ ನೀಡುವಂತೆ ಒತ್ತಾಯಿಸಿದ್ದಾರೆ.
ಕನಿಷ್ಠ ಗೌರವಧನಕ್ಕಾಗಿ ಆಶಾ ಕಾರ್ಯಕರ್ತೆಯರಿಂದ ಕೊಡಗು ಡಿಸಿಗೆ ಮನವಿ - ಕೊಡಗು ಡಿಸಿಗೆ ಮನವಿ
ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ವಿತರಿಸುವಂತೆ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಅಲ್ಲದೇ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ವಿತರಿಸುವಂತೆ ಆಶಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕೊಡಗು ಗುಡ್ಡಗಾಡು ಜಿಲ್ಲೆಯಾಗಿರುವುದರಿಂದ ಓಡಾಡುವುದು ತೀವ್ರ ಸಮಸ್ಯೆ. ದೂರಕ್ಕೊಂದು ಮನೆ ಇರುವುದರಿಂದ ತಿರುಗಾಡಲು ಕಷ್ಟವಾಗುತ್ತದೆ. ಹಳ್ಳ-ಕೊಳ್ಳಗಳನ್ನು ದಾಟಿ ಸರ್ವೇ ಮಾಡಬೇಕಿದೆ.
ಹಾಗೆಯೇ ಮಡಿಕೇರಿ ತಾಲೂಕಿನ ಗಾಳಿಬೀಡಿನಲ್ಲಿ ಆಶಾ ಕಾರ್ಯಕರ್ತೆಯರು ಹಗ್ಗ ಹಿಡಿದು ಹೊಳೆ ದಾಟಬೇಕಿದೆ. ಅಲ್ಲಿಗೆ ವಾಹನಗಳ ವ್ಯವಸ್ಥೆಯ ಅಗತ್ಯವಿದೆ. ಬಡ ಕುಟುಂಬಗಳಾಗಿರುವುದರಿಂದ ನಮ್ಮ ಜೀವನ ಕಷ್ಟದಲ್ಲಿದೆ. ಹೀಗಾಗಿ ಗೌರವಧನ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.