ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಸೌದೆ ತರಲೋಗಿದ್ದ ಮಹಿಳೆ ಮೇಲೆ ಎರಗಿದ ಕಾಮುಕರು: ವಿಡಿಯೋ ಮಾಡಿ ಬೆದರಿಕೆ - ಕೊಡಗಿನಲ್ಲಿ ಅತ್ಯಾಚಾರ

ಕೊಡಗು ಜಿಲ್ಲೆಯಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಎಂಬುವರು ತಾವೂರಿನ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.

Arrest of two rape accused in Kodagu
ಸೌದೆಗೆ ಹೋಗಿದ್ದ ಮಹಿಳೆ ಮೇಲೆ ಎರಗಿದ ಕಾಮುಕರು:

By

Published : May 17, 2020, 11:44 AM IST

ಕೊಡಗು: ಸೌದೆ ತರಲು ಹೋಗಿದ್ದ ಮಹಿಳೆ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಮಡಿಕೇರಿ ತಾಲೂಕಿನ ತಾವೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಬಂಧಿತ ಆರೋಪಿಗಳು. ತಾವೂರಿನ ವಿವಾಹಿತ ಮಹಿಳೆಯೊಬ್ಬಳು ಸೌದೆ ತರಲು ತೆರಳಿದ್ದಾಗ ಆಕೆ ಮೇಲೆ‌ ಈ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.

ಅತ್ಯಾಚಾರ ಆರೋಪಿ

ಚಿದಾನಂದ್ ಅತ್ಯಾಚಾರವೆಸಗುವ ವೇಳೆ ಚೇತನ್ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ.‌ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ. ಭಯದಿಂದ ಮಹಿಳೆ ಸುಮ್ಮನಿದ್ದರೂ ಕೆಲವು ದಿನಗಳ ಬಳಿಕ ಆರೋಪಿಗಳು ವಿಡಿಯೋ ವೈರಲ್ ಮಾಡಿದ್ದಾರೆ‌. ವೈರಲ್ ವಿಡಿಯೋ ವಿಚಾರ ತಿಳಿದು ಮಹಿಳೆ‌ ಮಡಿಕೇರಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅತ್ಯಾಚಾರ ಆರೋಪಿ

ಸಂತ್ರಸ್ತೆ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details