ಕೊಡಗು:ಬಿಳಿ ಬಣ್ಣದ ಗೂಬೆಯನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ವೀರಾಜಪೇಟೆಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಸಿಬ್ಬಂದಿ ಮಂಜೇಶ್ವರದ ಮಹಮದ್ ನಡುಬೈಲ್, ಅಬ್ದುಲ್ ಸತ್ತಾರ್ ಹಾಗು ದಕ್ಷಿಣ ಕನ್ನಡದ ಬಿ.ಶೇಕಬ್ಬನನ್ನು ಬಂಧಿಸಿದೆ.
ಬಿಳಿ ಬಣ್ಣದ ಗೂಬೆಯಿಂದ ಶ್ರೀಮಂತಿಕೆ ಪ್ರಾಪ್ತಿ ಎಂದು ನಂಬಿಸಿ ವಂಚನೆ, ಮೂವರ ಬಂಧನ - three accused arrested in kodagu selling owl
ಬಿಳಿ ಬಣ್ಣದ ಗೂಬೆಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳ ಬಂಧಿಸಿದೆ.
ಆರೋಪಿ
ಈ ಆರೋಪಿಗಳು ಬಿಳಿ ಗೂಬೆಯನ್ನು ಕೊಡಗಿನ ಕಾಫಿತೋಟದಲ್ಲಿ ಹಿಡಿದಿದ್ದರು. ಇದನ್ನು ಮನೆಯಲ್ಲಿಟ್ಟರೆ ಒಳ್ಳೆಯದಾಗುತ್ತೆ, ಹಣ ವೃದ್ಧಿಯಾಗುತ್ತೆ ಮತ್ತು ಶ್ರೀಮಂತಿಕೆ ಪ್ರಾಪ್ತಿಯಾಗುತ್ತೆ ಎಂದೆಲ್ಲ ಅಮಾಯಕರನ್ನು ನಂಬಿಸಿ ವಂಚನೆ ಮಾಡುತ್ತಿದ್ದರು. ಈ ಪ್ರಕರಣ ಪೊಲೀಸರಿಗೆ ತಿಳಿಯುತ್ತಿದ್ದಂತೆ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದರು. ಆರೋಪಿಗಳಿಂದ ವ್ಯಾಗನರ್ ಕಾರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸೋನಿಯಾ ಗಾಂಧಿ ಆರೋಗ್ಯದಲ್ಲಿ ಚೇತರಿಕೆ; ಗಂಗಾರಾಮ್ ಆಸ್ಪತ್ರೆಯಿಂದ ಬಿಡುಗಡೆ