ಕೊಡಗು: ಕುಶಾಲನಗರ ಸಮೀಪದ ಚಿನ್ನೇನಹಳ್ಳಿ ಬಳಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಈತನ ಜೊತೆಗಿದ್ದ ನಾಲ್ವರು ಪರಾರಿಯಾಗಿದ್ದಾರೆ.
ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಓರ್ವನ ಬಂಧನ, ನಾಲ್ವರು ಪರಾರಿ
ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಚಿನ್ನೇನಹಳ್ಳಿ ಬಳಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನ ಬಂಧಿಸಿದ್ದು, ಈತನ ಜೊತೆಗಿದ್ದ ನಾಲ್ವರು ಪರಾರಿಯಾಗಿದ್ದಾರೆ.
ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಓರ್ವನ ಬಂಧನ...ನಾಲ್ವರು ಎಸ್ಕೇಪ್
ದೊಡ್ಡ ಹೊನ್ನೂರು ಕಾವಲು ಗ್ರಾಮದ ಯುಸೂಫ್ ಬಂಧಿತ ಆರೋಪಿ. ಈತ ಕುಶಾಲನಗರ ಸಮೀಪದ ಚಿನ್ನೇನಹಳ್ಳಿ ಬಳಿ ಶ್ರೀಗಂಧದ ಸಾಗಿಸುತ್ತಿದ್ದಾಗ ಆರ್‌ಎಫ್‌ಓ ಕೊಟ್ರೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈತನ ಜೊತೆಗಿದ್ದ ಮೈಸೂರು ಜಿಲ್ಲೆಯ ಲಕ್ಷ್ಮಣ, ಚಂದು, ದೊಡ್ಡಸ್ವಾಮಿ ಮತ್ತು ಬಸವರಾಜ ಎಂಬ ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಬಂಧಿತನಿಂದ 5 ಲಕ್ಷ ಮೌಲ್ಯದ 60 ಕೆ.ಜಿ.ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.