ಕೊಡಗು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಗುಂದ ಗ್ರಾಮದ ದಾಸಯ್ಯ ಬಂಧಿತ ಆರೋಪಿಯಾಗಿದ್ದು, ಈತ ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ತಲಾ ಒಂದೊಂದು ಕೆ.ಜಿ.ತೂಕದ ಪ್ಯಾಕೆಟ್ ಮಾಡಿ, ಒಟ್ಟು 15 ಕೆ.ಜಿ.ಗೊಮಾಂಸ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು: ಅಕ್ರಮ ಗೋಮಾಂಸ ಮಾರಾಟ: ವ್ಯಕ್ತಿಯ ಬಂಧನ - ಕೊಡಗಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು, ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಅಕ್ರಮ ಗೋಮಾಂಸ ಮಾರಾಟ
ಪಶು ವೈದ್ಯ ಡಾ. ಸತೀಶ್ ಕುಮಾರ್ ಅವರು ಗೋಮಾಂಸವನ್ನು ಪರಿಶೀಲಿಸಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್ಐ ಕೃಷ್ಣನಾಯಕ್, ಎಎಸ್ಐ ಗೋವಿಂದ್, ಸಿಬ್ಬಂದಿ ಬೋಪಣ್ಣ, ಶಫೀರ್, ಲೋಕೇಶ್, ಮುರಳಿ, ವಿನಯ್ ಪಾಲ್ಗೊಂಡಿದ್ದರು.